ಗೋಣಿಕೊಪ್ಪ.
ಇಂದು ಸಂಜೆ ಮೈಸೂರಿನಿಂದ ವಿರಾಜಪೇಟೆಗೆ ಬರುತ್ತಿದ್ದ ಇನ್ನೋವಾ ಕಾರು ತಿತಿಮತಿ - ಗೋಣಿಕೊಪ್ಪ ಮುಖ್ಯ ರಸ್ತೆಯ ಚೆನ್ನಂಗೊಲ್ಲಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ.
ಬೆಂಗಳೂರು ಮೂಲದ ಕಾರು ಇದ್ದಾಗಿದ್ದು ಕಾರಿನಲ್ಲಿ ಇದ್ದ ಉಳಿದ ಐವರಲ್ಲಿ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದು ಮೂವರು ಪ್ರಾಣಾಪಾಯದಿಂದ ಪಾರಗಿದ್ದಾರೆ ಎಲ್ಲರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಗೋಣಿಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದರು.
ಅಪಘಾತ ನಡೆದ ಸ್ಥಳದಲ್ಲಿ ಸೇರಿದ ಮಂದಿ ವಿಡಿಯೋ ಚಿತ್ರೀಕರಣದಲ್ಲಿ ತಲ್ಲೀನರಾದ ಸತ್ ಪ್ರಜೆಗಳು. ಅಪಘಾತ ಸಂದರ್ಭ ವಿಡಿಯೋಕ್ಕಿಂತ ಮೊದಲು ಅವರ ಜೀವ ಉಳಿಸಲು ಪ್ರಯತ್ನಿಸಿ ಎಂದು ಮನವಿ ಮಾಡಿದ ರಕ್ಷಣೆ ಮಾಡಿದ ಸ್ಥಳೀಯ ಯುವಕ.
ಅಪಘಾತ ಸಂಭವಿಸಿದ ಸ್ಥಳದ ಸುತ್ತ ಸೇರಿದ ಮಂದಿ ಅಪಘಾತಕ್ಕೆ ಈಡಾದವರನ್ನು ರಕ್ಷಿಸುವ ಬದಲು ವಿಡಿಯೋ ಮಾಡುವಲ್ಲಿ ತಲ್ಲೀನರಾದ ಘಟನೆಯ ಕುರಿತು ಮಾತನಾಡಿ, ಹಲವರಿಗೆ ಮಾನವೀಯತೆ ಪಾಠವನ್ನು ಮಾಡಿದ್ದಾರೆ