ಹುಣಸೂರು.
ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯ ಕಾಡಂಚಿನ ಗ್ರಾಮ ಕಾಮೇಗೌಡನಹಳ್ಳಿ ಬೋರೆಯಯಲ್ಲಿ ಮೇಕೆಗಳ ಮೇಲೆ ಚಿರತೆ ದಾಳಿ 5 ಮೇಕೆಗಳನ್ನು ಕೊಂದು ಬಿಟ್ಟು ಹೋಗಿರುವ ಚಿರತೆ.
ಬೆಳಿಗ್ಗಿನ ಜಾವ 4 ಗಂಟೆ ಸಮಯದಲ್ಲಿ ಗ್ರಾಮದ ಜಯಮ್ಮ ತಮ್ಮೇಗೌಡರ ಕೊಟ್ಟಿಗೆಯಲ್ಲಿದ ಮೇಕೆಗಳನ್ನು ತಿನ್ನಲ್ಲು ಬಂದ ಚಿರತೆ 5 ಮೇಕೆಗಳನ್ನು ಕೊಂದು ಪರಾರಿಯಾಗಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಬಂದು ಮಹಾಜರು ಮಾಡಿದು ತಲಾ ಕುರಿಗೆ 3ರಿಂದ ನಾಲ್ಕು ಸಾವಿರ ಪರಿಹಾರ ಕೊಡುವುದಾಗಿ ಹೇಳುತ್ತಿದ್ದಾರೆ, ಇದು ನಿಜಕ್ಕೂ ಮೇಕೆ ಸಾಕಾಣಿಕೆದಾರರಿಗೆ ನಷ್ಟ ಉಂಟಾಗಲಿದೆ ಇವರು ಕೊಡುವ ಪರಿಹಾರ ಆ ಮೇಕೆಯ ಅರ್ಧದಷ್ಟು ಬೆಲೆಕೂಡ ಇಲ್ಲದಾಗಿದ್ದು ಪಶು ಇಲಾಖೆಯಿಂದ ಕೂಡ ಪರಿಹಾರ ಸಿಗುವುದಿಲ್ಲ. ಹಾಗಾಗಿ ಅರಣ್ಯ ಇಲಾಖೆ ಹೆಚ್ಚಿನ ಅನುದಾನ ನೀಡಬೇಕು ಎಂದು ಗ್ರಾಮದ ಕುಮಾರ್ ನಾಯಕ್ ಮತ್ತು ಯುವ ಮುಖಂಡ ಹೊಂಬೇಗೌಡರು ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರು.
ಮಾಹಿತಿ.
ಹೊಂಬೇಗೌಡರು.