ವಿರಾಜಪೇಟೆ.
ನಿನ್ನೆ ವಿರಾಜಪೇಟೆಯ ವಕೀಲರ ಸಂಘದ ಅಧ್ಯಕ್ಷರಾದ ಸಿ. ಕೆ ಪೊವಣ್ಣರವರ ಮೇಲೆ ಅವರ ಕಚೇರಿಗೆ ನುಗ್ಗಿ ಅಂಬಟ್ಟಿ ಗ್ರಾಮದ ನಿವಾಸಿಗಳಾದ ಎಂ.ಸಿ ವಿಜಯ್ ಕುಮಾರ್ ಹಾಗೂ ಅವನ ಮಗ ಸುನಿಲ್ ಮಗಳು ಸಂಧ್ಯಾ ಎಂಬುವವರು ವಕೀಲರ ಮೇಲೆ ಅವ್ಯಚ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಹಲ್ಲೆ ನಡೆಸಲು ಯತ್ನಿಸಿ ಬೆದರಿಕೆ ಹಾಕಿ ಹೋಗಿರುವ ಘಟನೆಯನ್ನು ಖಂಡಿಸಿ ಇಂದು ವಕೀಲರು ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆಯನ್ನು ನಡೆಸಿದರು
ಇಂದು ವಿರಾಜಪೇಟೆ ವಕೀಲರ ಸಂಘದಿಂದ ತುರ್ತು ಸಭೆಯಲ್ಲಿ ಘಟನೆಯನ್ನು ಖಂಡಿಸಿದ ವಕೀಲರು ಆರೋಪಿಗಳ ವಿರುದ್ಧ ಸೂಕ್ತ ತನಿಖೆ ಕೈಗೊಳ್ಳಬೇಕು ಹಾಗೆ ಆರೋಪಿತರ ಪರ ಜಿಲ್ಲೆಯ ಯಾವುದೇ ವಕೀಲರು ವಕಾಲತು ವಹಿಸಬಾರದು ಎಂಬ ನಿರ್ಣಯವನ್ನು ಕೈಗೊಂಡಿದ್ದಾರೆ ಎಂದು ಸಂಘದ ಉಪಾಧ್ಯಕ್ಷರಾದ ಪ್ರಶಾಂತ್ ಮಾಹಿತಿ ನೀಡಿದರು. ಅಲ್ಲದೆ ಕೂಡಲೇ ಆರೋಪಗಳನ್ನು ಬಂದಿಸಬೇಕು. ಇಲ್ಲದ್ದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು.
ಪ್ರಕರಣ ಸಂಬಂಧ ನಿನ್ನೆ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಕೆ.ಎಂ.ಮಾದಪ್ಪ, ಸೇರಿದಂತೆ ಹಲವಾರು ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ: ರವಿ ಕುಮಾರ್