One Tap News - Kannada News Daily

Header
collapse
...
Home / Kodagu / ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಿಐಪಿಯು ವಿದ್ಯಾರ್ಥಿನಿ ಮಂಡೆಪಂಡ ನಿಶಿತಾ ನೀಲಮ್ಮ ಸಾಧನೆ.

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಿಐಪಿಯು ವಿದ್ಯಾರ್ಥಿನಿ ಮಂಡೆಪಂಡ ನಿಶಿತಾ ನೀಲಮ್ಮ ಸಾಧನೆ.

2025-10-28  Kodagu Desk  15 views
ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಿಐಪಿಯು ವಿದ್ಯಾರ್ಥಿನಿ ಮಂಡೆಪಂಡ ನಿಶಿತಾ ನೀಲಮ್ಮ ಸಾಧನೆ.

ಪೊನ್ನಂಪೇಟೆ. 

ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು ಕಾಲೇಜಿನ  ದ್ವಿತೀಯ ಪಿ.ಯು.ವಿಜ್ಞಾನ ವಿಭಾಗದ  ವಿದ್ಯಾರ್ಥಿನಿಯಾದ ಕುಮಾರಿ.ಎಂ.ಎಸ್.ನಿಶಿತಾ ನೀಲಮ್ಮ  ಮೈಸೂರಿನಲ್ಲಿ ವಿ.ಎನ್.ಯೋಧ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ವತಿಯಿಂದ ಆಯೋಜಿಸಿದ್ದ  5 ನೇ ರಾಷ್ಟ್ರ ಮಟ್ಟದ ಕರಾಟೆ - 2025 ಸ್ಪರ್ಧೆಯಲ್ಲಿ  ಭಾಗವಹಿಸಿದ್ದರು.

ಈ ಸ್ಪರ್ಧೆಯಲ್ಲಿ  ಕುಮಿಟೇ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು  ಕತಾ ವಿಭಾಗದಲ್ಲಿ ದ್ವಿತೀಯ ಸ್ಥಾನ  ಪಡೆದಿರುತ್ತಾರೆ. ಇವರನ್ನು ಸಿ.ಐ.ಪಿ.ಯು. ಪ್ರಾಂಶುಪಾಲೆ ಡಾ.ರೋಹಿಣಿ ತಿಮ್ಮಯ್ಯ ಅಭಿನಂದಿಸಿದರು.ಕುಮಾರಿ  ಎಂ.ಎಸ್.ನಿಶಿತ ನೀಲಮ್ಮ  ಮಂಡೆಪಂಡ ಸಿ.ನಂದ ಸುಬ್ಬಯ್ಯ ಮತ್ತು ಎಂ.ಎಸ್.ಆಶಾ ಸುಬ್ಬಯ್ಯ ದಂಪತಿಯ ಪುತ್ರಿಯಾಗಿದ್ದಾರೆ. ಇವರು ವಿರಾಜಪೇಟೆ ಮೆಬುಕಾನ್ ಗೊಜುರಿಯೋ ಸಂಸ್ಥೆಯ ಶಿಕ್ಷಕರಾದ ಸೆನ್ಸಾಯಿ  ಎಂ.ಬಿ.ಚಂದ್ರನ್ ಅವರ ಮಾರ್ಗದರ್ಶನದಲ್ಲಿ ಕರಾಟೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.


Share: