One Tap News - Kannada News Daily

Header
collapse
...
Home / Kodagu / ವಿರಾಜಪೇಟೆಯಲ್ಲಿ ಖಾಸಗಿ ಫೈನಾನ್ಸ್ ನಲ್ಲಿ ಗ್ರಾಹಕರಿಗೆ ಪಂಗನಾಮ.

ವಿರಾಜಪೇಟೆಯಲ್ಲಿ ಖಾಸಗಿ ಫೈನಾನ್ಸ್ ನಲ್ಲಿ ಗ್ರಾಹಕರಿಗೆ ಪಂಗನಾಮ.

2025-11-04  Kodagu Desk  13 views
ವಿರಾಜಪೇಟೆಯಲ್ಲಿ ಖಾಸಗಿ ಫೈನಾನ್ಸ್ ನಲ್ಲಿ ಗ್ರಾಹಕರಿಗೆ ಪಂಗನಾಮ.

ವಿರಾಜಪೇಟೆ. 

ವಿರಾಜಪೇಟೆಯಲ್ಲಿ ಖಾಸಗಿ ಫೈನಾನ್ಸ್ ನಲ್ಲಿ ಗ್ರಾಹಕರಿಗೆ ಪಂಗನಾಮ.

ಸುಮಾರು ಹನ್ನೊಂದು ಲಕ್ಷ ರೂಪಾಯಿ ಪಡೆದು ವಂಚನೆ .

ಪೈನಾನ್ಸ್  ಮಾಲೀಕರ ವಿರುದ್ಧ ವಿರಾಜಪೇಟೆ ನಗರ ಠಾಣೆ ಯಲ್ಲಿ ಮೊಕದ್ದಮೆ ದಾಖಲು.

 ಸುಮಾರು 106 ಗ್ರಾಹಕರಿಂದ ಪಿಗ್ಮಿ ಹಣ ಪಡೆದು ಹಣ ನೀಡಿದೆ ವಂಚನೆ ಮಾಡಿದ ವೆಂಕಟಾದ್ರಿ ಫೈನಾನ್ಸ್ ಮಾಲೀಕ ಗಣೇಶ್ ಅವರ ಮೇಲೆ ಮೋಸ ಹಾಗೂ ವಂಚನೆ ಮಾಡಿದ ಬಗ್ಗೆ ಗ್ರಾಹಕರಾದ ನಿಜಾಮುದ್ದಿನ್ ಅವರು ವಿರಾಜಪೇಟೆ ನಗರ ಠಾಣೆ ಯಲ್ಲಿ ಗಣೇಶ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಗಣೇಶ್ ಅವರು ಈ ಹಿಂದೆ ವಿರಾಜಪೇಟೆ ಯಲ್ಲಿ ಕುಭೆರ ಮಿತ್ರ ಎಂಬ ಫೈನಾನ್ಸ್ ಸಂಸ್ಥೆಯಲ್ಲಿ ವ್ಯವಸ್ಥಾಪಕ ರಾಗಿದ್ದು ಕಳೆದ ಮಾರ್ಚ್ ತಿಂಗಳ 2024 ರಲ್ಲಿ ವಿರಾಜಪೇಟೆ ಎಫ್ ಎಮ್ ಸಿ ರಸ್ತೆ ಯ ಕಪ್ಪು ಶೆಟ್ಟಿ ಕಾಂಪ್ಲೆಕ್ಸ್ ನಲ್ಲಿ ಸ್ವಂತ ವಾಗಿ ಕಛೇರಿ ಸ್ಥಾಪನೆ ಮಾಡಿದ್ದರು.

ಅ ಕಛೇರಿಯಲ್ಲಿ ವ್ಯವಸ್ಥಾಪಕ ರಾಗಿ ಷಣ್ಮುಖ ಹಾಗೂ ಸಿಬ್ಬಂದಿ ಗಳಾಗಿ ಚಂದ್ರಕಲಾ, ದಿವ್ಯ, ಭಾಗ್ಯ, ಸೌಮ್ಯ, ಕಲ್ಕೇಶ್ವರಿ,ಮಹೇಶ್ವರಿ, ಕವಿತ ಮತ್ತು ಪಾಲಿ ಬೆಟ್ಟ ದ ಭಾಗದಲ್ಲಿ ಪಿಗ್ಮಿ ಸಂಗ್ರಹ ಮಾಡಲು ಲಲಿತ, ಅಮ್ಮತ್ತಿ ಭಾಗದಲ್ಲಿ ಸುಬ್ರಹ್ಮಣಿ, ಅವರನ್ನು ಕೆಲಸಕ್ಕೆ ಸೇರಿಕೊಂಡು ಹಣ ಸಂಗ್ರಹ ಮಾಡುತ್ತಿದ್ದರು.

ಒಂದಕ್ಕೆ ಮೂರು ಪಟ್ಟು ಹಣವನ್ನು ಸಾಲವಾಗಿ ನೀಡುವುದಾಗಿ ಭರವಸೆ ನೀಡಿ ಹಣವನ್ನು ಸಂಗ್ರಹ ಮಾಡುತ್ತಿದ್ದರು.

ಆರಂಭದಲ್ಲಿ ಕೆಲವು ಸದಸ್ಯರಿಗೆ ಖಾಲಿ ಚೆಕ್ ಹಾಗೂ ಇನ್ನಿತರ ದಾಖಲೆ ಗಳನ್ನು ಪಡೆದು ಸಾಲ ನೀಡಿದ್ದಾರೆ ಅವರ ಸಾಲ ಮುಗಿದರೂ ಕೂಡ ಇದುವರೆಗೂ ಖಾಲಿ ಚೆಕ್ ನೀಡದೇ ಸತಾಹಿಸುತ್ತಿದ್ದಾರೆ ಎಂದು ಮಾದ್ಯಮ ಮುಂದೆ ಕೆಲವರು ಮಾಹಿತಿ ನೀಡಿದರು.

ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕವಿತ ಅವರಿಗೆ ಸಂಸ್ಥೆಯ ಮಾಲೀಕರಾದ ಗಣೇಶ್ ಅವರು ಅನೇಕ ತಿಂಗಳ ಸಂಬಳವನ್ನು ನೀಡದೇ ಮೊಬೈಲ್ ನಲ್ಲಿ ನನ್ನ ನಂಬರ್‌ ಅನ್ನು ಬ್ಲಾಕ್ ಮಾಡಿದ್ದಾರೆ ಎಂದು ವಿರಾಜಪೇಟೆ ನಗರ ಪೊಲೀಸ್ ಠಾಣೆ ಯಲ್ಲಿ ಮೊಕದೊಮ್ಮೆ ದಾಖಲಿಸಿದ್ದಾರೆ .ಅಲ್ಲದೆ ಇನ್ನೂ ಅನೇಕ ಗ್ರಾಹಕರು ಗಣೇಶ್ ವಿರುದ್ಧ ವಿರಾಜಪೇಟೆ ನಗರ ಹಾಗೂ ಸಿದ್ದಾಪುರ ಠಾಣೆ ಯಲ್ಲಿ ಪುಕಾರು ನೀಡಿದ್ದಾರೆ.

ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ..


Share: