One Tap News - Kannada News Daily

Header
collapse
...
Home / Kodagu / ಶಾಸಕರ ಕಛೇರಿಯಿದ್ದರೂ ಶಾಸಕರು ಸರ್ಕಾರಿ ಕಛೇರಿಗೆ ಬರುತ್ತಿಲ್ಲ ಪಿ.ಎಲ್.ಡಿ.ಬ್ಯಾಂಕ್ ಉಪಾಧ್ಯಕ್ಷ ಬಿ.ಜಿ.ಬೊಪಣ್ಣ.

ಶಾಸಕರ ಕಛೇರಿಯಿದ್ದರೂ ಶಾಸಕರು ಸರ್ಕಾರಿ ಕಛೇರಿಗೆ ಬರುತ್ತಿಲ್ಲ ಪಿ.ಎಲ್.ಡಿ.ಬ್ಯಾಂಕ್ ಉಪಾಧ್ಯಕ್ಷ ಬಿ.ಜಿ.ಬೊಪಣ್ಣ.

2025-11-15  Kodagu Desk  80 views
ಶಾಸಕರ ಕಛೇರಿಯಿದ್ದರೂ ಶಾಸಕರು ಸರ್ಕಾರಿ ಕಛೇರಿಗೆ ಬರುತ್ತಿಲ್ಲ   ಪಿ.ಎಲ್.ಡಿ.ಬ್ಯಾಂಕ್ ಉಪಾಧ್ಯಕ್ಷ ಬಿ.ಜಿ.ಬೊಪಣ್ಣ.

ವಿರಾಜಪೇಟೆ. 

ಕಳೆದ ಎರಡು ವರ್ಷಗಳಿಂದ ಎರಡು ಬಾರಿ ಸರ್ಕಾರದ ಶಾಸಕರ ಕಛೇರಿಗೆ ಬಂದು ಹೋಗಿದ್ದಾರೆ. ಶಾಸಕರ ಕಛೇರಿಯಿದ್ದರೂ ಶಾಸಕರು ಸರ್ಕಾರಿ ಕಛೇರಿಗೆ ಬರುತ್ತಿಲ್ಲ ಎಂದು ಆರೋಪಿಸಿದ ಪಿ.ಎಲ್.ಡಿ.ಬ್ಯಾಂಕ್ ಉಪಾಧ್ಯಕ್ಷ ಬಿ.ಜಿ.ಬೊಪಣ್ಣ.

ಸಾರ್ವಜನಿಕರು ಶಾಸಕರನ್ನು ಭೇಟಿ ಮಾಡಲು ಅವರು ಮನೆಗೆ ತೆರಳಲು ನೂರು ರೂಪಾಯಿ ಆಟೋಗೆ ಕೊಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಸಕರು ಇಡೀ ವಿರಾಜಪೇಟೆ ತಾಲೋಕಿನ ಜನತೆಗೆ ಶಾಸಕರು ಕೇವಲ ಕಾಂಗ್ರೆಸ್ ಪಕ್ಷದ ಶಾಸಕರಲ್ಲ.

ವಿವಿಧ ರೀತಿಯ ಸಾರ್ವಜನಿಕ ಸಮಸ್ಯೆಗಳು ಶಾಸಕರ ಗಮನ ಸೆಳೆಯಲು ಶಾಸಕರ ಮನೆಗೆ ಹೋಗಲು ಸಾದ್ಯವಿಲ್ಲ, ವಿವಿಧ ಪಕ್ಷಗಳ ಕಾರ್ಯಕರ್ತರು ಶಾಸಕರ ಮನೆಗೆ ತೆರಳಲು ಸಾಧ್ಯವೇ ಎಂದು ಬೊಪಣ್ಣ ಪ್ರಶ್ನೆ ಮಾಡಿದರು.

ಇಂದು ವಿರಾಜಪೇಟೆಯಲ್ಲಿ ಸುದ್ದಿಗೋಷ್ಟಿ ನಡೆಸಿದ ವಿರಾಜಪೇಟೆ/ಪೊನ್ನಂಪೇಟೆ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಉಪಾಧ್ಯಕ್ಷ ಹಾಗೂ ಬೇಟೊಳಿ ನಿವಾಸಿ ಬಿ.ಜೆ.ಬೊಪಣ್ಣ ಅವರು ಶಾಸಕರ ನಡೆಯ ಬಗ್ಗೆ ಪ್ರಶ್ನೆ ಮಾಡಿದರು.

ಶಾಸಕರು ಕೊಡಗಿನಲ್ಲಿ ಹುಟ್ಟಿ ಬೆಳೆದು ಕೊಡಗಿನಲ್ಲಿ ಯಾವಾಗ ಮಳೆ ಬೀಳುತ್ತದೆ ಎಂಬ ಮಾಹಿತಿ ಅರಿತ್ತಿದ್ದರು ಮಳೆಗಾಲದಲ್ಲಿ ರಸ್ತೆ ಕಾಮಗಾರಿ ನೆಡೆಸಿ ನಿಲ್ಲಿಸಿದ್ದಾರೆ, ಅಲ್ಲದೆ ಬಿಜೆಪಿ ಪಕ್ಷದ ಸದಸ್ಯರಿಗೆ ನೂತನ ತಂತ್ರಜ್ಞಾನದ ಬಗ್ಗೆ ಸಲಹೆ ಕೇಳಿದ್ದು ಸರಿಯಾದ ರೀತಿಯಲ್ಲ.

 ಕಾಡಾನೆ ದಾಳಿ ಬಗ್ಗೆ ಅರಣ್ಯ ವನ್ಯಜೀವಿ ಮಂಡಳಿಯ ಸದಸ್ಯರು ನಾಪತ್ತೆಯಾಗಿದ್ದಿರಾ ಎಂದು ಪ್ರಶ್ನೆ ಮಾಡಿದರು.

ಕಾಡಿನಲ್ಲಿ ಇರುವ ವನ್ಯಜೀವಿಗಳು ಯಾವುದೇ ಪಕ್ಷಕ್ಕೆ ಸೇರಿ ಪ್ರಾಣಿಗಳಲ್ಲ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಕಾಡನೆ ದಾಳಿ ಯಾಗುತ್ತಿದೆ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಬಗ್ಗೆ ಅರಣ್ಯ ಸಚಿವರ ಬಗ್ಗೆ ವಿವಿಧ ರೀತಿಯ ಪ್ರತಿಭಟನೆ ನಡೆಸುತ್ತಿದ್ದ ಸಂಕೇತ್ ಪೂವಯ್ಯ ಎಲ್ಲಿ ಹೋದರು ಎಂದು ಬೊಪಣ್ಣ ತಿಳಿಸಿದರು.

ಮುಂದಿನ ದಿನಗಳಲ್ಲಿ ಶಾಸಕರು ಸರ್ಕಾರದ ತಮ್ಮ ಕಚೇರಿಯಲ್ಲಿ ಸಾರ್ವಜನಿಕ ಸಮಸ್ಯೆಗೆ ಸಿಗುವಂತಾಗಲಿ ಎಂದು ಬೊಪಣ್ಣ ತಿಳಿಸಿದರು.


Share: