One Tap News - Kannada News Daily

Header
collapse
...
Home / Kodagu / ವಿರಾಜಪೇಟೆ ಪುರಸಭೆಗೆ ನೂತನ ಆಡಳಿತಾಧಿಕಾರಿಯಾಗಿ ನಿತಿನ್ ಚಕ್ಕಿ ಅಧಿಕಾರ ಸ್ವೀಕಾರ.

ವಿರಾಜಪೇಟೆ ಪುರಸಭೆಗೆ ನೂತನ ಆಡಳಿತಾಧಿಕಾರಿಯಾಗಿ ನಿತಿನ್ ಚಕ್ಕಿ ಅಧಿಕಾರ ಸ್ವೀಕಾರ.

2025-11-15  Kodagu Desk  161 views
ವಿರಾಜಪೇಟೆ ಪುರಸಭೆಗೆ ನೂತನ ಆಡಳಿತಾಧಿಕಾರಿಯಾಗಿ ನಿತಿನ್ ಚಕ್ಕಿ ಅಧಿಕಾರ ಸ್ವೀಕಾರ.

ವಿರಾಜಪೇಟೆ. 

ಇಂದು ಅಧಿಕೃತವಾಗಿ ಆಗಮಿಸಿದ ಆಡಳಿತಾಧಿಕಾರಿಯನ್ನು ಹೂ ಗುಚ್ಚ ನೀಡಿ  ಮುಖ್ಯಾಧಿಕಾರಿ ನಾಚಪ್ಪ ಅವರು ಬರಮಾಡಿಕೊಂಡರು.

ನಂತರ ಕಛೇರಿ ಸಿಬ್ಬಂದಿ ಗಳ ಸಭೆ ನಡೆಸಿದರು.

ಸಿಬ್ಬಂದಿಗಳ ಮಾಹಿತಿ ಪಡೆದ ಅಧಿಕಾರಿಗಳ ಕಾರ್ಯಗಳ ಬಗ್ಗೆ ಮಾಹಿತಿ ಕಲೆ ಹಾಕಿದರು , ಪ್ರಗತಿಯಲ್ಲಿರುವ  ಕಾಮಗಾರಿಯ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಕಳೆದ ಮೂರು ವರ್ಷಗಳ ಹಿಂದಿನಿಂದ ಸರ್ಕಾರದಿಂದ  ಬಿಡುಗಡೆಯಾದ ಹಣದ  ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಸರ್ಕಾರದ ಕೆಲಸ ಯಾವುದೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಪಿ.ಕೆ.ನಾಚಪ್ಪ. ಪರಿಸರ ಅಭಿಯಂತರ ರೀತುಸಿಂಗ್, ವ್ಯವಸ್ಥಾಪಕರಾದ ಸುಜಾತ ಸೇರಿದಂತೆ ಇತರೆ ಸಿಬ್ಬಂದಿಗಳು ಆಜರಿದ್ದರು..

ಅಧಿಕಾರ ವಹಿಸಿಕೊಂಡು ಮಾತನಾಡಿ ದ ಆಡಳಿತ ಅಧಿಕಾರಿ ನಿತಿನ್ ಚಕ್ಕಿ ಯಾವರು  ನಾನು ಅಧಿಕಾರ ವಹಿಸಿಕೊಂಡ್ಡೀನೆ ಸರ್ಕಾರದ ಯಾವುದೇ ಕೆಲಸ ವನ್ನು ಸರಿಯಾದ ಸಮಯದಲ್ಲಿ ಮಾಡಿಸಿ ಕೊಡುತ್ತೇನೆ ಸಾರ್ವಜನಿಕ ರು ಸಹಕಾರ ನೀಡುವಂತೆ ತಿಳಿಸಿದರು.

ಈ ಹಿಂದೆ ನಡೆದ ಆಡಳಿತ ಮಂಡಳಿಯ ಭ್ರಷ್ಟಾಚಾರ ಆಗಿದೆ ಎಂದು ಕಂಡು ಬಂದಲ್ಲಿ ಅಂತವರ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. 

ಪೌರ ಕಾರ್ಮಿಕರಿಗೆ ದಿನ ಕೂಲಿ ಕಾರ್ಮಿಕರಿ ಸಂಬಳ ನೀಡಲು ತಕ್ಷಣ ಕ್ರಮವನ್ನು ಕೈಗೊಳ್ಳುತ್ತೇವೆ.

ವಾರ್ಡ್ ವಿಂಗಡನೆ ಬಗ್ಗೆ ಅಸಮಾಧಾನ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಭೆ ಕರೆದು ಕ್ರಮವನ್ನು ಅನುಸರಿಸುತ್ತೇವೆ ಎಂದು ತಿಳಿಸಿದರು.


Share: