ಹುಣಸೂರು.
ಹುಣಸೂರು ತಾಲ್ಲೂಕಿನ ರತ್ನಾಪುರಿಯಲ್ಲಿನ ಲೈಯಾನ ಸಂಸ್ಥೆ ಆಶ್ರಯದಲ್ಲಿ ಬೆಂಗಳೂರಿನ ಪ್ರಕೃತಿ ಸಂರಕ್ಷಣಾ ಸಂಸ್ಥೆ ನೆರವಿನಿಂದ ಪಕ್ಷಿ ಪ್ರಭೇದಗಳನ್ನು ಪರಿಚಯಿಸುವ ಕಾರ್ಯಗಾರವನ್ನು ಭಾನುವಾರ ಏರ್ಪಡಿಸಕಾಗಿತ್ತು.
ಭಾರತದಲ್ಲಿ ಸುಮಾರು 1300 ಪ್ರಭೆದದ ಪಕ್ಷಿಗಳಿವೆ. ಪ್ರತಿ ಪ್ರಭೇದ ಧ್ವನಿ, ಕೂಗು, ಜೀವನಶೈಲಿ ಬೇರೆಯೇ ಇರುತ್ತೆ. ಹಣ್ಣುಗಳನ್ನು ತಿನ್ನುವ, ಕೀಟಗಳನ್ನು ತಿನ್ನುವ, ದಾನ್ಯಗಳನ್ನು ತಿನ್ನುವ, ಮಾಂಸತಿನ್ನುವ, ಮೀನು, ಹುಳುಗಳನ್ನು ತಿನ್ನುವ ಪಕ್ಷಿ ಪ್ರಭೇದಗಳಿವೆ. ಇವುಗಳನ್ನು ಸಂರಕ್ಷಿಸುವುದು ಪ್ರಕೃತಿ ಸಮತೋಲನ ದೃಷ್ಟಿಯಿಂದ ಬಹುಮುಖ್ಯ ಎಂದರು. ವಿವಿಧ ಪಕ್ಷಿಗಳ ಅವಸಸ್ಥಾನ ಬೇರೆಯೇ ಇರುತ್ತದೆ.

ಕಾಡು, ಕೆರೆ, ಸರೋವರ, ತೋಟ, ಕುರುಚಲು ಕಾಡು ಗದ್ದೆ ಬಯಲು, ಹುಲ್ಲುಗಾವಲು, ಹಾಗು ಜನವಸತಿ ಗಳಲ್ಲಿಯೂ ವಾಸಿಸುತ್ತವೆ. ಅವುಗಳ ಜೀವನ, ಪ್ರಣಯ, ಸಂತಾನೋತ್ಪತ್ತಿ ಇವೆಲ್ಲವು ಬಹು ಆಕರ್ಷನಿಯ ಎಂದು ಪ್ರಕೃತಿ ಸಂರಕ್ಷಣೆ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಅಭಿಷೇಕ ಹಾಗು ದೀಪ್ತಿ ತಿಳಿಸಿದರು. ಅವುಗಳು ಮನುಷ್ಯರೂ ಸೇರಿದಂತೆ ವಿವಿಧಜೀವಿಗಳಿಂದ ಗಂಡಾಂತರ ಎದುರಿಸುತ್ತಿವೆಯಾದ್ದರಿಂದ ಕಾಪಾಡುವ ಹೊಣೆಗಾರಿಕೆಯೂ ಮನುಷ್ಯರ ಮೇಲಿದೆ ಎಂದರು.
ಕಾರ್ಯಾಗಾರದಲ್ಲಿ ಶಿಕ್ಷಕರು, ಸಮಾಜಿಕ ಕಾರ್ಯಕತರು, ಪಕ್ಷಿ ವೀಕ್ಷಕರು ಪಾಲ್ಗೊಂಡಿದ್ದರು. ಮಕ್ಕಳಿಗೆ ಪಕ್ಷಿಗಳ ವೀಕ್ಷಣೆ ಕುರಿತು ತಿಳುವಳಿಕೆ ನೀಡುವ ಕ್ರಮಗಳನ್ನು ಆಟದಮೂಲಕ ಕಾರ್ಯಾಗಾರದಲ್ಲಿ ಹಾಗು ಕೆರೆ ಯೊಂದರಲ್ಲಿ ಪ್ರತ್ಯಕ್ಷ ದರ್ಶನದ ಮೂಲಕ ವಿವರಿಸಿದರು. ಮಕ್ಕಳಲ್ಲಿ ಪರಿಸರ ಪ್ರೇಮ, ಮರಗಳು, ಪ್ರಾಣಿ ಪಕ್ಷಿಗಳ ಪ್ರೇಮ ಬೆಳ ಸಬೇಕು ಎಂದರು.
ಪಕ್ಷಿಗಳನ್ನು ಪರಿಚಯಿಸುವ ಬಿತ್ತಿ ಪತ್ರ, ಪುಸ್ತಕ, ಕಾರ್ಡ್ಸ್, ಪೋಸ್ಟರ್ಸ್ ಕೂಡ ವಿತರಿಸಿ ಈ ಜ್ಞಾನವನ್ನು ತಮ್ಮ ತಮ್ಮ ಪರಿಸರದಲ್ಲಿ ಕಾರ್ಯಾಗಾರ ಮಾಡಿ ಹಂಚಿಕೊಳ್ಳಬೇಕು ಎಂದರು.
ವರದಿ.. ಶ್ರೀಕಾಂತ್