One Tap News - Kannada News Daily

Header
collapse
...
Home / Kodagu / ಸ್ನೇಹ ಸಮ್ಮಿಲನ ಮತ್ತು ಗುರುವಂದಾನ ಕಾರ್ಯಕ್ರಮ.

ಸ್ನೇಹ ಸಮ್ಮಿಲನ ಮತ್ತು ಗುರುವಂದಾನ ಕಾರ್ಯಕ್ರಮ.

2025-12-11  Kodagu Desk  318 views
ಸ್ನೇಹ ಸಮ್ಮಿಲನ ಮತ್ತು ಗುರುವಂದಾನ ಕಾರ್ಯಕ್ರಮ.

ಗೋಣಿಕೊಪ್ಪ. 

ಹಾತೂರು ಸರ್ಕಾರಿ ಶಾಲೆಯ 1985-86 ರ ಸಾಲಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳು ನಲವತ್ತು ವರ್ಷಗಳ ನಂತರ ಒಂದು ಕಡೆ ಸೇರಿ ತಮಗೆ ವಿದ್ಯೆಯನ್ನು ಕಲಿಸಿದ ಗುರುಗಳನ್ನು ಗೌರವಿಸಿದ ಕಾರ್ಯಕ್ರಮ ಗೋಣಿಕೊಪ್ಪದ ಖಾಸಗಿ ಸಭಾಂಗಣದಲ್ಲಿ ನಡೆಯಿತು.

ಹಾತೂರಿನ ಸುಜಾತ ಗೋಣಿಕೊಪ್ಪದ ಬಿ.ಎನ್. ಪ್ರರಕಾಶ್, ಕುಟ್ಟದ ಪೊಲೀಸ್ ಅಧಿಕಾರಿ ಪೂವಣ್ಣ ಅವರು ಇತ್ತೀಚೆಗೆ ತಮ್ಮ ಬಾಲ್ಯದ ಗೆಳೆಯರ ವ್ಯಾಟ್ ಅಪ್ ಗ್ರೂಪ್ ಅನ್ನು ರಚನೆ ಮಾಡಿಕೊಂಡು ಈ ರೀತಿಯ ಕಾರ್ಯಕ್ರಮ ನಡೆಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ತಮಗೆ ವಿದ್ಯಾಭ್ಯಾಸ ನೀಡಿದ ಮಾಜಿ ಶಿಕ್ಷಕರಾದ ಗೋಪಾಲ ಕೃಷ್ಣ, ವಿಶ್ವನಾಥ, ನಟರಾಜ ಹಾಗೂ ಶ್ರೀಮತಿ ಲೀಲಾವತಿ ಅವರು ಆಗಮಿಸಿದ್ದರು.

ಆರಂಭದಲ್ಲಿ ಅಗಲಿದ ಶಿಕ್ಷಕರಿಗೆ ಮೌನಾಚರಣೆ ಮಾಡಲಾಯಿತು.

ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಆಗಮಿಸಿದ ಎಲ್ಲಾ ಸದಸ್ಯರು ಪ್ರಸ್ತುತ ನೆಲೆಸಿರುವ ಹಾಗೂ ಅವರ ಸ್ಥಾನ ಮಾನದ ಬಗ್ಗೆ ಪರಿಚಯ ಮಾಡಿಕೊಟ್ಟರು.

ನಂತರ ತಮಗೆ ವಿದ್ಯೆಯನ್ನು ಧಾರೆಯೆರೆದು ತಾವುಗಳು ಈ ಸ್ಥಿತಿಗೆ ಬರಲು ಕಾರಣರಾದ ಗುರುಗಳಿಗೆ ಪೇಟ ಧರಿಸಿ ಸನ್ಮಾನ ಮಾಡಲಾಯಿತು.

1001937932.jpg

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕರಾದ ವಿಜ್ಞಾನ ಪಾಠವನ್ನು ಹೇಳಿಕೊಡುತ್ತಿದ್ದ ವಿಶ್ವನಾಥ ಮಾತನಾಡಿ ಸುಮಾರು ನಲವತ್ತು ವರ್ಷಗಳ ಹಿಂದೆ ನೀವು ಹಾತುರು ಸರ್ಕಾರಿ ಶಾಲೆಗೆ ಕಲಿಯಲು ಬಂದಿದ್ದೀರ ನಾನು ಕಲಿಸಲು ಬಂದಿದ್ದೆವು.  ಇಬ್ಬರ ನಡುವಿನ ಉದ್ದೇಶ ಒಂದೇ ಆಗಿತ್ತು ಕಲಿಯುವುದು ಮಾತ್ರ.

ಅಂದು ನೀವು ಕಲಿತಿದ ಶಿಸ್ತು ಬದ್ಧ ವಿದ್ಯಾಭ್ಯಾಸ ಇಂದು ನಮ್ಮಂತಹ ಗುರುಗಳನ್ನು ಗುರುತಿಸಿ ಸನ್ಮಾನ ಮಾಡಿರುವುದು ಸಂತೋಷದ ವಿಷಯವಾಗಿದೆ.

  ಅಂದು ನಿಮ್ಮ ಕಲಿಕೆಯ ಸಮಯದಲ್ಲಿ ನಿಮ್ಮ ಮೇಲೆ ಹಲ್ಲೆ ಮಾಡಿದ್ದೆ ಅದನ್ನು ಬದಿಗಿಟ್ಟು ಇಂದು ನನ್ನನ್ನು ಹಾಗೂ ನನ್ನ ಪತ್ನಿಯನ್ನು ಕರೆಸಿ ಉತ್ತಮ ಆತಿಥ್ಯ ನೀಡಿ ಗೌರವಿಸಿದ್ದಿರ ಮುಂದೆ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಆರೈಸಿದರು.

ನಲವತ್ತು ವರ್ಷಗಳ ಹಿಂದೆ ದೈಹಿಕ ಶಿಕ್ಷಣ ಹೇಳಿಕೊಡುತ್ತಿದ್ದ ನಿವೃತ್ತ ಶಿಕ್ಷಕರಾದ ಗೋಪಾಲ ಕೃಷ್ಣ ಅವರು ಮಾತನಾಡಿ ಅಂದು ಹಾತುರಿನ ಉತ್ತಮ ಪರಿಸರದಲ್ಲಿ ವಿದ್ಯೆ ಹಾಗೂ ವಿವಿಧ ರೀತಿಯ ಕ್ರೀಡೆಯನ್ನು ಕಲಿಸಿಕೊಟ್ಟಿದ್ದೆ ತಪ್ಪಾದಾಗ ನಿಮ್ಮ ಮೇಲೆ ಹಾಕಿ ಸ್ಟಿಕ್ ನಿಂದ ಹೊಡಿದಿದ್ದು ಕೂಡ ನನಗೆ ನೆನಪಿದೆ ಹಲ್ಲೆ ಮಾಡಿದ ಉದ್ದೇಶ ನಮ್ಮ ಶಾಲೆಯ ಮಕ್ಕಳು ಮುಂದೆ ಉತ್ತಮ ರೀತಿಯಲ್ಲಿ ಇರಬೇಕು ಎಂದು ಅಷ್ಟೇ ಯಾವುದೇ ದುರುದ್ದೇಶ ಇರಲಿಲ್ಲ ಎಂದು ತಿಳಿಸಿದರಲ್ಲದೆ ಇಂದು ನೀವು ಪಾಠ ಕಲಿತ ಶಾಲೆಯ ಸ್ಥಿತಿ ಶೋಚನೀಯ ಸ್ಥಿತಿಗೆ ಬಂದು ತಲುಪಿದೆ ಅದುದರಿಂದ ತಾವುಗಳು ಉನ್ನತ ಸ್ಥಾನದಲ್ಲಿ ಇರುವ ಕಾರಣದಿಂದ ಹಳೆಯ ವಿದ್ಯಾರ್ಥಿ ಸಂಘವನ್ನು ಸ್ಥಾಪಿಸಿಕೊಂಡು ಶಾಲೆ ಯನ್ನು ಅಭಿವೃದ್ಧಿ ಮಾಡಬೇಕು ಎಂದು ತಿಳಿಸಿದರು.

ನಲವತ್ತು ವರ್ಷಗಳ ಹಿಂದೆ ಹಿಂದಿ ವಿಭಾಗದಲ್ಲಿ ಶಿಕ್ಷಣ ನೀಡಿದ ನಟರಾಜ ಅವರು ಮಾತನಾಡಿ ನಾವು ನಮ್ಮ ವೃತ್ತಿ ಜೀವನದಲ್ಲಿ ಸಾವಿರಾರು ಮಕ್ಕಳಿಗೆ ಹಿಂದಿ ಪಾಠವನ್ನು ಹೇಳಿ ಕೊಟ್ಟಿದ್ದೇನೆ ಆದರೆ ಯಾರು ಕೂಡ ಗುರುತಿಸುವ ಕೆಲಸ ಮಾಡಲಿಲ್ಲ ನೀವು ನೀಡಿದ ಅಥಿತಿ ಸತ್ಕಾರ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ತಿಳಿಸಿದರಲ್ಲದೆ ನಾನು ಮೈಸೂರಿನಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದೇನೆ ನಿಮಗೆ ನನ್ನ ಅವಶ್ಯಕತೆ ಇದ್ದರೆ ದಯವಿಟ್ಟು ನನ್ನನ್ನು ಸಂಪರ್ಕ ಮಾಡಿ ನಿಮಗೆ ಯಾವುದೇ ರೀತಿಯ ಸಹಾಯ ಮಾಡಲು ಸಿದ್ದನಾಗಿದ್ದೇನೆ ಎಂದು ಕಾರ್ಯಕ್ರಮವನ್ನು ಹಾಡಿನ ರೂಪದಲ್ಲಿ ವರ್ಣಿಸಿದರು.

ನಂತರ ಈ ಗುರುಗಳಿಂದ ಪಾಠವನ್ನು ಕಲಿತ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು.

ಬಿ.ಎನ್. ಪ್ರಕಾಶ್, ಪೂವಣ್ಣ, ಪದ್ಮಾವತಿ ಟಿ.ಬಿ.ಶೋಬಿತ, ನಳಿನಿ, ರಜನಿದೇವಯ್ಯ, ಮನೆಯಪಂಡ ತಿಮ್ಮಯ್ಯ, ಮಾತನಾಡಿದರು.

ಮುಂದೆ ಪ್ರತಿವರ್ಷ ವಿವಿಧ ಭಾಗಗಳಲ್ಲಿ ಈ ರೀತಿಯ ಸಮ್ಮಿಲನ ಕಾರ್ಯಕ್ರಮ ವನ್ನು ಮುಂದುವರಿಸುತ್ತೇವೆ ಎಂದು ಆಗಮಿಸಿದ ಎಲ್ಲಾ ಸದಸ್ಯರು ನಿರ್ಧಾರ ಕೈಗೊಂಡರು..


Share: