One Tap News - Kannada News Daily

Header
collapse
...
Home / Kodagu / ಕಾಫಿ ತೋಟದಲ್ಲಿ ಮಗು ಪತ್ತೆ. ಆಗ ತಾನೆ ಹುಟ್ಟಿದ ಗಂಡು ಬಿಟ್ಟು ಹೋಗಿರುವ ಶಂಕೆ.

ಕಾಫಿ ತೋಟದಲ್ಲಿ ಮಗು ಪತ್ತೆ. ಆಗ ತಾನೆ ಹುಟ್ಟಿದ ಗಂಡು ಬಿಟ್ಟು ಹೋಗಿರುವ ಶಂಕೆ.

2025-12-11  Kodagu Desk  57 views
ಕಾಫಿ ತೋಟದಲ್ಲಿ  ಮಗು ಪತ್ತೆ. ಆಗ ತಾನೆ ಹುಟ್ಟಿದ ಗಂಡು ಬಿಟ್ಟು ಹೋಗಿರುವ ಶಂಕೆ.

ವಿರಾಜಪೇಟೆ. 

ಹೆತ್ತ ಕಂದನನ್ನು ರಸ್ತೆಯ ಪಕ್ಕದ ಕಾಫಿ ತೋಟದಲ್ಲಿ ಬಿಟ್ಟು ಹೋದ ಪಾಪಿಗಳು.
ವಿರಾಜಪೇಟೆ ಹೊರವಲಯದ ಬಿಟ್ಟಂಗಾಲ ಗ್ರಾಮದ ಪೆಗ್ಗಿರಿಕಾಡಿನಲ್ಲಿ ಕೆಲವೇ ಗಂಟೆಗಳಲ್ಲಿ ಹುಟ್ಟಿದ ಗಂಡು ಮಗುವನ್ನು ಈ ರೀತಿಯಲ್ಲಿ ಅನಾಥವಾಗಿ ಬಿಟ್ಟು ಪರಾರಿಯಾಗಿದ್ದಾರೆ.


ನೆನ್ನೆ ಮದ್ಯಾಹ್ನ ಪೆಗ್ಗರಿಕಾಡಿನ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಮಗುವಿನ ಅಳುವಿನ ಸದ್ದು ಕೇಳಿದಾಗ ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿ ವಿರಾಜಪೇಟೆ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಗುವನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಪಾಲನೆ ಮಾಡಲಾಗುತ್ತಿದೆ.
ಮಗುವಿನ ಹೆತ್ತವರನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ ಅಲ್ಲದೆ ಪೊಲೀಸರು ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ..


Share: