One Tap News - Kannada News Daily

Header
collapse
...
Home / Kodagu / ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರನ್ನು ಗಡಿಪಾರು ಮಾಡುವಂತೆ ಕೊಡಗು ಬಿಜೆಪಿ ಆಗ್ರಹ.

ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರನ್ನು ಗಡಿಪಾರು ಮಾಡುವಂತೆ ಕೊಡಗು ಬಿಜೆಪಿ ಆಗ್ರಹ.

2025-12-11  Kodagu Desk  46 views
ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರನ್ನು ಗಡಿಪಾರು ಮಾಡುವಂತೆ  ಕೊಡಗು ಬಿಜೆಪಿ ಆಗ್ರಹ.

ವಿರಾಜಪೇಟೆ. 

ದೇಶದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ಮಡಿಕೇರಿಯ ನಾಲ್ಕು ಮಂದಿಯನ್ನು ಕೊಡಗಿನಿಂದ ಗಡಿಪಾರು ಮಾಡುವಂತೆ ವಿರಾಜಪೇಟೆ ನಗರ ಠಾಣೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಮನವಿ ಮಾಡಿದ್ದರು. 

ಕೊಡಗು ಎಸ್ಸಿ ಮೋರ್ಚಾದ ಜಿಲ್ಲಾ ಅದ್ಯಕ್ಷರು ಹಾಗೂ ಕೆದಮೂಳ್ಳುರು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಪರಮೇಶ್  ಮಾತನಾಡಿ ಕೇರಳ ರಾಜ್ಯದಿಂದ ಕೆಲಸ ಹರಿಸಿ ಕೊಡಗಿಗೆ ಆಗಮಿಸಿ ಇಲ್ಲ ಸಲ್ಲದ ನಮ್ಮ ನಾಯಕರ ವಿರುದ್ಧ ಮೊಬೈಲ್ ನಲ್ಲಿ ಚಾಟಿಂಗ್ ಮಾಡುವುದು ಸಾಮಾನ್ಯವಾಗಿದೆ ಇಂತವರಿಗೆ ಕುಮ್ಮಕ್ಕು ನೀಡಿ ಸಹಕರಿಸುವ ಯಾರೇ ಆಗಿದ್ದರೂ ಅವರ ಮೇಲೆ ನಿರ್ಲಕ್ಷ್ಯವಾಗಿ ಕಾನೂನು ಕ್ರಮವನ್ನು ಕೈಗೊಳ್ಳಬೇಕು.

ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು ಇವರ ವಿರುದ್ಧ ಕಾನೂನು ಕ್ರಮವನ್ನು ಅನುಸರಿಸಿ ಮುಂದೆ ನಮ್ಮ ದೇಶದ ಯಾವುದೇ ಪ್ರಾಭಾವಿ ಸದಸ್ಯರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದರೆ ಮುಂದಿನ ದಿನಗಳಲ್ಲಿ ಬಿಜೆಪಿ ವತಿಯಿಂದ ಅವರನ್ನು ಪೋಷಿಸುವವರ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಿರಾಜಪೇಟೆ ನಗರ ಬಿಜೆಪಿ ಅದ್ಯಕ್ಷರಾದ ಅನಿಲ್ ಮಂದಣ್ಣ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ರಘು ನಾಣಯ್ಯ, ಮಾಜಿ ಪಟ್ಟಣ ಪಂಚಾಯತಿ ಸದಸ್ಯರಾದ ಜೂನ ಸುನೀತಾ, ವಿವಿಧ ಬಿಜೆಪಿ ಪಕ್ಷದ ಸಂಘಟನೆ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.

ವರದಿ. ರವಿ ಕುಮಾರ್ 


Share: