ಪೊನ್ನಂಪೇಟೆ.
ಪೊನ್ನಂಪೇಟೆ ಸಮೀಪದ ನಲ್ಲೂರು ಗ್ರಾಮದ ಗೌರಿಬಾಣೆ ಪೈಸಾರಿ ಸಮೀಪ ಶಾಲೆಯಿಂದ ಸಂಜೆ ಶಾಲಾ ಮಕ್ಕಳನ್ನು ಅವರವರ ಮನೆಗೆ ಕರೆದುಕೊಂಡು ಹೋಗುತ್ತಿದ್ದ, ಖಾಸಗಿ ಟಿ ಟಿ ವಾಹನ ರಸ್ತೆ ಬದಿ ದಿಣ್ಣೆಗೆ ಅಪ್ಪಳಿಸಿದ ಪರಿಣಾಮ ವಾಹನ ಮಗಚಿಕೊಂಡು ಒರ್ವ ವಿದ್ಯಾರ್ಥಿಗೆ ಗಂಭೀರ ಸ್ವರೂಪದ ಗಾಯಗಳು ಉಂಟಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಯಿ ಶಂಕರ್ ಶಾಲೆಯ ನಾಲ್ವರು ವಿದ್ಯಾರ್ಥಿಗಳಿಗೆ ಸಣ್ಣ ಪ್ರಮಾಣದಲ್ಲಿ ಗಾಯಗಳು ಉಂಟಾಗಿವೆ, ಸಂತ ಅಂತೋಣಿ ಶಾಲೆ ಇಬ್ಬರು ವಿದ್ಯಾರ್ಥಿಗಳಿಗೆ ಕೂಡ ಗಾಯಗಳು ಉಂಟಾಗಿದೆ. ಯಾವುದೇ ಪ್ರಾಣಪಯ ಸಂಭವಿಸದೆ ಉಳಿದ ವಿದ್ಯಾರ್ಥಿಗಳು ಮನೆ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆಗೆ ಕಾರಣ ತಿಳಿದು ಬಂದಿಲ್ಲ ಪೊನ್ನಂಪೇಟೆ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.