ವಿರಾಜಪೇಟೆಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ದೈವಜ್ಞ ದರ್ಶನ ಕಾರ್ಯಕ್ರಮ
ಕರ್ಕಿ ಮಠದ ಯತಿಗಳಿಂದ ಆಶೀರ್ವಚನ
ಪೂರ್ಣ ಕುಂಭ ಸ್ವಾಗತದೊಂದಿಗೆ ಯತಿಗಳನ್ನು ಬರಮಾಡಿಕೊಂಡ ದೈವಜ್ಞ ಬ್ರಾಹ್ಮಣರು
ವಿರಾಜಪೇಟೆ.
ವಿರಾಜಪೇಟೆಯ ನಿಸರ್ಗ ಬಡಾವಣೆಯ ದೈವಜ್ಞ ಬ್ರಾಹ್ಮಣ ಸಮಾಜದಲ್ಲಿ ದಕ್ಷಿಣ ಕೊಡಗು ದೈವಜ್ಞ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ದೈವಜ್ಞ ದರ್ಶನ ಕಾರ್ಯಕ್ರಮ ಜರುಗಿತು.
ಬೆಳಿಗ್ಗೆ ಮಹಿಳೆಯರು ಪೂರ್ಣ ಕುಂಭದೊಂದಿಗೆ ಶ್ರೀ ಕ್ಷೇತ್ರ ಕರ್ಕಿ ಮಠದ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾ ಸ್ವಾಮಿಗಳು ಹಾಗೂ ಶ್ರೀ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮಿಗಳನ್ನು ಭವ್ಯವಾಗಿ ಸ್ವಾಗತಿಸಿ ನಂತರ ಅಲಂಕೃತ ರಥದಲ್ಲಿ ನಿಸರ್ಗ ಲೇಔಟ್ನಲ್ಲಿರುವ ದೈವಜ್ಞ ಮಂಟಪದವರೆಗೆ ಮೆರವಣಿಗೆಯನ್ನು ನಡೆಸಿದರು.
ವೇದಿಕೆಯಲ್ಲಿ ದೈವಜ್ಞ ಬ್ರಾಹ್ಮಣ ಶ್ರೀ ಮಠದ ಟ್ರಸ್ಟಿ ಬೆಂಗಳೂರಿನ ಗಣಪತಿ ಶೇಟ್, ಕರ್ಕಿ ಮಠದ ಪ್ರಧಾನ ಪುರೋಹಿತರಾದ ಯೋಗೀಶ್ ಭಟ್, ದಕ್ಷಿಣ ಕೊಡಗು ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ವಿರಾಜಪೇಟೆಯ ಮಾತ ಜ್ಯುವೆಲರಿ ಮಾಲೀಕರಾದ ಉಲ್ಲಾಸ್ ಶೇಟ್, ಸ್ಥಾಪಕ ಅಧ್ಯಕ್ಷರಾದ ಗೋಣಿಕೊಪ್ಪಲಿನ ಜಯಲಕ್ಷ್ಮಿ ಜ್ಯುವೆಲ್ಸ್ ಮಾಲೀಕರಾದ ಎಂ. ಜಿ ಮೋಹನ್, ಪ್ರಧಾನ ಕಾರ್ಯದರ್ಶಿಯಾದ ಬಿ. ಎಸ್ ಬಾಲಕೃಷ್ಣ(ಬಾಲು) ಮತ್ತಿತರರು ಉಪಸ್ಥಿತರಿದ್ದು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಉಭಯ ಶ್ರೀಗಳವರನ್ನು ನಗರದ ಆಂಜನೇಯ ದೇವಸ್ಥಾನದಿಂದ ಪಟ್ಟಣದ ಮುಖ್ಯಬೀದಿಯಲ್ಲಿ ಕಾರು, ಬೈಕ್ ರ‍್ಯಾಲಿ ಹಾಗೂ ಮಂಗಳವಾದ್ಯ, ಭಜನಾ ನೃತ್ಯ, ಟ್ಯಾಬ್ಲೋಗಳ ಮೂಲಕ ಪೂರ್ಣಕುಂಭ ಸ್ವಾಗತದೊಂದಿಗೆ ಸಭಾಂಗಣದವರೆಗೆ ಬರಮಾಡಿಕೊಳ್ಳಲಾಯಿತು. ನಂತರ ದೀಪ ಬೆಳಗಿಸಿ ಉದ್ಘಾಟನೆಯನ್ನು ಯತಿಗಳು ನೆರವೇರಿಸಿದರು.
ವೇದಿಕೆಯಲ್ಲಿ ದೈವಜ್ಞ ಬ್ರಾಹ್ಮಣ ಶ್ರೀಮಠದ ಟ್ರಸ್ಟಿಗಳಾದ ಬೆಂಗಳೂರಿನ ಗಣಪತಿ ಶೇಟ್, ಗದಗಿನ ಅರುಣ್ ವರ್ಣೆಕರ ಅವರನ್ನು ಸನ್ಮಾನಿಸಲಾಯಿತು.
ದೈವಜ್ಞ ಸಮಾಜದ ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಶ್ರೀ ದೈವಜ್ಞ ಕುಲ ಗುರುಗಳಿಗೆ ಪಾದಪೂಜೆ ಹಾಗೂ ಗುರುವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಉಪಾಧ್ಯಕ್ಷ ನಾರಾಯಣ, ಖಜಾಂಚಿ ಆರ್ ರಾಜೇಶ್ ಶೇಟ್, ಪ್ರದಾನ ಕಾರ್ಯದರ್ಶಿ ಬಾಲಕೃಷ್ಣ, ವೆಂಟೇಶ್, ಸೌಮ್ಯ ನಾಗೇಶ್, ಮುಂತಾದ ಗಣ್ಯರು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.