One Tap News - Kannada News Daily

Header
collapse
...
Home / Kodagu / ಆನೆ ತುಳಿತಕ್ಕೆ ಪತ್ನಿ ಬಲಿ; ಐಪಿಎಸ್ ಅಧಿಕಾರಿ ಸುನಿಲ್ ಅಚ್ಚಯ್ಯ ಅವರಿಗೆ ಸಿಎಂ ಡಿ ಕೆ ಶಿವಕುಮಾರ್ ಸಾಂತ್ವನ

ಆನೆ ತುಳಿತಕ್ಕೆ ಪತ್ನಿ ಬಲಿ; ಐಪಿಎಸ್ ಅಧಿಕಾರಿ ಸುನಿಲ್ ಅಚ್ಚಯ್ಯ ಅವರಿಗೆ ಸಿಎಂ ಡಿ ಕೆ ಶಿವಕುಮಾರ್ ಸಾಂತ್ವನ

2026-06-06  Kodagu Desk  12 views
ಆನೆ ತುಳಿತಕ್ಕೆ ಪತ್ನಿ ಬಲಿ; ಐಪಿಎಸ್ ಅಧಿಕಾರಿ ಸುನಿಲ್ ಅಚ್ಚಯ್ಯ ಅವರಿಗೆ ಸಿಎಂ ಡಿ ಕೆ ಶಿವಕುಮಾರ್ ಸಾಂತ್ವನ

 

ಮಡಿಕೇರಿ. 

ಕೊಡಗು ಜಿಲ್ಲೆ ಕೋಣನಕಟ್ಟೆ ಗ್ರಾಮದಲ್ಲಿ ಇಂದು ಬೆಳಗ್ಗೆ ಕಾಡಾನೆ ದಾಳಿಗೆ ಬಲಿಯಾದ ಸಂಧ್ಯಾ ಅಚ್ಚಯ್ಯ ಅವರ ಪತಿ ಹಾಗೂ ದೆಹಲಿಯಲ್ಲಿ ಡಿಜಿಪಿ ಆಗಿರುವ ಸುನಿಲ್ ಅಚ್ಚಯ್ಯ ಅವರಿಗೆ ಸಿಎಂ ಡಿ ಕೆ ಶಿವಕುಮಾರ್ ಅವರು ದೂರವಾಣಿ ಕರೆ ಮಾಡಿ ಸಂತಾಪ ಸೂಚಿಸಿ ಸಾಂತ್ವನ ಹೇಳಿದ್ದಾರೆ.

ಇದೊಂದು ಅಘಾತಕಾರಿ ಘಟನೆ. ವಿಷಯ ತಿಳಿದು ಬಹಳ ದುಃಖವಾಯಿತು. ನಿಮ್ಮ ನೋವಿನಲ್ಲಿ ನಾವೂ ಭಾಗಿ. ನಿಮಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಸಿಎಂ ಅವರು ಸುನಿಲ್ ಅಚ್ಚಯ್ಯ ಅವರಿಗೆ ಹೇಳಿದರು.

ಕಾಡಾನೆ ಹಾವಳಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿರುವುದಾಗಿಯೂ ಅವರು ತಿಳಿಸಿದರು.

ಸಂಧ್ಯಾ ಅಚ್ಚಯ್ಯ ಅವರು ತಿತಿಮತಿ ಸಮೀಪದ ಕಾಫಿ ತೋಟದಲ್ಲಿ ಕೆಲಸ ವೀಕ್ಷಣೆಗೆ ತೆರಳಿದ್ದಾಗ ಕಾಡನೆ ಹಠಾತ್  ದಾಳಿ ನಡೆಸಿ ಅವರನ್ನು ಸಾಯಿಸಿತ್ತು. 


Share: