ಹುಣಸೂರು.
ಕಾವೇರಿ ಎಕ್ಸ್ ಪ್ರೆಸ್ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವ ಮತ್ತು ವಾಯ್ಸ್ ಆಫ್ ಕನ್ನಡ ಕಸ್ತೂರಿ ಎಂಬ ರಾಜ್ಯ ಮಟ್ಟದ ಗಾಯನ ಸ್ಪರ್ಧೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಾಮಾಜಿಕ ಜನಸೇವಾ ಕ್ಷೇತ್ರದಡಿ ಅರ್ಜುನ್, ಮಹದೇವಮ್ಮ
ಶೈಕ್ಷಣಿಕ ಕ್ಷೇತ್ರದಡಿ ಮಂಜುಳಾ, ಸತೀಶ್ ಹೆಚ್ ಆರ್ ತರಿಕಲ್, ಕಲಾಕ್ಷೇತ್ರದಡಿ ಕುಮಾರ್ ಅರಸೇಗೌಡ, ಗಜೇಂದ್ರ ಕಿರಿಜಾಜಿ, ಅರುಣ್ ಆದಿಶ್ರೀ,
ನೃತ್ಯ ವಿಭಾಗದಲ್ಲಿ ಅಂಬಾರಿ ಪರಮೇಶ್,
ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಜೋಗೇಂದ್ರನಾಥ್ ಮತ್ತು ಕ್ರೀಡಾ ಕ್ಷೇತ್ರಕ್ಕೆ ಕುಟ್ಟಿ ಮಸೂದ್ ಇವರೆಲ್ಲರಿಗೂ ಕನ್ನಡ ರಾಜ್ಯೋತ್ಸವ ರಾಜ್ಯಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ಸಮಾಜ ಸೇವಕರು ಆದ ರಾಜುತರಿಕಲ್ ಮೊದಲಿಗೆ ಎಲ್ಲಾ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಕೋರಿದರು. ನವೆಂಬರ್ 1 ಕೇವಲ ಒಂದು ದಿನವಲ್ಲ, ಅದು ನಮ್ಮೆಲ್ಲರ ಅಸ್ಮಿತೆ ಮತ್ತು ಹೆಮ್ಮೆಯ ಸಂಕೇತ ಎಂದರು.
ಭಾಷಾವಾರು ಪ್ರಾಂತ್ಯಗಳ ಪುನರ್ವಿಂಗಡಣೆಯಾದಾಗ, ವಿವಿಧ ಭಾಗಗಳಲ್ಲಿ ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳೆಲ್ಲಾ ಒಂದಾಗಿ 'ಮೈಸೂರು ರಾಜ್ಯ' ಉದಯವಾಯಿತು.
1973ರಲ್ಲಿ, ದೇವರಾಜ ಅರಸು ಅವರ ಮುಖ್ಯಮಂತ್ರಿತ್ವದಲ್ಲಿ, ರಾಜ್ಯಕ್ಕೆ ಅಧಿಕೃತವಾಗಿ 'ಕರ್ನಾಟಕ' ಎಂದು ನಾಮಕರಣ ಮಾಡಲಾಯಿತು.
ಈ ಏಕೀಕರಣದ ಹಿಂದೆ ಅನೇಕ ಮಹನೀಯರ, ಹೋರಾಟಗಾರರ ತ್ಯಾಗ ಮತ್ತು ಪರಿಶ್ರಮವಿದೆ. ಅವರ ದೂರದೃಷ್ಟಿಯಿಂದಾಗಿ ನಾವಿಂದು ಒಂದೇ ಸೂರಿನಡಿ ಕನ್ನಡಿಗರಾಗಿ ಬದುಕುತ್ತಿದ್ದೇವೆ.ಎಂದು ಕನ್ನಡಭಿಮಾನಿಗಳಿಗೆ ಮತ್ತು ಇಂತಹ ಕನ್ನಡ ಕನ್ನಡ ಪರ ಕೆಲಸಗಳಿಗೆ ಯಾವಾಗಲು ಜೊತೆಗೆ ನಿಲ್ಲುವುದಾಗಿ ತಿಳಿಸಿದರು.
ಮಾಜಿ ನಗರ ಸಭಾ ಅಧ್ಯಕ್ಷರಾದ ಹೆಚ್ ವೈ ಮಹದೇವ್ ಮಾತನಾಡಿ ಕಾವೇರಿ ಎಕ್ಸ್ ಪ್ರೆಸ್ ತಂಡ ಹಲವಾರು ವರ್ಷಗಳಿಂದ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದು ಇಂದು 70ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದು ನಿಜವಾಗಿಯೂ ತಂಡದ ಒಂದು ಸಾಧನೆ ಎಂದು ಹೊಗಳಿದರು.
ಸಾಯಿನಾಥ್ ರವರು ಮಾತನಾಡಿ ಕನ್ನಡ ನಾಡು ನುಡಿಯ ಬಗ್ಗೆ ಮಾತನಾಡಿ ಕಾವೇರಿ ಎಕ್ಸ್ ಪ್ರೆಸ್ ತಂಡಕ್ಕೆ ಶುಭಾಶಯ ಕೋರಿದರು.
ನಂತರ ಈ ಸಂದರ್ಭದಲ್ಲಿ ನಡೆದ ವಾಯ್ಸ್ ಆಫ್ ಕನ್ನಡ ಕಸ್ತೂರಿ ಎಂಬ ರಾಜ್ಯ ಮಟ್ಟದ ಗಾಯನ ಸ್ಪರ್ಧೆಯ ಮೊದಲ ಹಂತದ ಗಾಯನ ಸ್ಪರ್ಧೆ ನಡೆಸಲಾಯಿತು.
ನಂತರ ತೀರ್ಪುಗಾರಾಗಿ ಸುವರ್ಣ ಗಾಯಕರು ಮಹದೇವ್ ಪ್ರಸಾದ್ ಮತ್ತು ಯುವ ಸಂಗೀತ ನಿರ್ದೇಶಕರಾದ ರಾಮ್ ಪ್ರಸನ್ನ ಆಗಮಿಸಿ ಉತ್ತಮವಾದ ತೀರ್ಪು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ವಾಯ್ಸ್ ಆಫ್ ಕನ್ನಡ ಕಸ್ತೂರಿಯ ಗ್ರಾಂಡ್ ಫಿನಾಲೆ ಗೆ ಆಯ್ಕೆಯಾದ ಹದಿನೈದು ಉತ್ತಮ ಗಾಯಕರಲ್ಲಿ ಮೊದಲ ಹಂತದ ಪ್ರಥಮ ಬಾಲು ಮಹೇಂದರ್, ದ್ವಿತೀಯ ಡಾ ಶಶಾಂಕ್ ಮತ್ತು ತೃತೀಯ ಸಿಂಚನ ಬಹುಮಾನ ಪಡೆದು ಕನ್ನಡ ಕಸ್ತೂರಿಯ ಗ್ರಾಂಡ್ ಪಿನಾಲೆ ಯ ಪ್ರಶಸ್ತಿ ಫೆವರೇಟ್ ಸ್ಪರ್ಧೆಗಳಾಗಿ ಭರವಸೆ ಮೂಡಿಸಿದ್ದಾರೆ.
ಉಳಿದಂತೆ ವೀರಭದ್ರ, ನೇತ್ರಾಮಂಜುನಾಥ್, ಶಾಂತಾರಮೇಶ್ ಹಾಗೂ ಸ್ಥಳೀಯ ಸುದ್ಧಿವಾಹಿನಿ ಮಾಲೀಕರುಗಳಾದ ಸಾಯಿನಾಥ್, ರಕ್ಷಿತ್ ಕುಮಾರ್, ಪರಮೇಶ್, ಮೂಕನ ಹಳ್ಳಿ ಮಹದೇವ್ ಮತ್ತು ಕಾವೇರಿ ಎಕ್ಸ್ ಪ್ರೆಸ್ ನ ಮಹದೇವ್ ಸ್ವಾಮಿ, ಲಿಂಗರಾಜು,ಅಮೃತ್, ಭಗವಾನ್ ದಾಸ್, ಮಾಧವನ್ ಅನಿಲ್, ರಮೀಜ್, ಗೌತಮಿ, ಭೂಮಿಕಾ ಮತ್ತು ನಂದಿ ಪ್ರಿಂಟ್ ನ ಮಹದೇವ್, ವೇಣು ಹಾಜರಿದ್ದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಲಕ್ಷ್ಮಿಕಾಂತ್ ನಡೆಸಿಕೊಟ್ಟರು.