One Tap News - Kannada News Daily

Header
collapse
...
Home / Mysore / ಬಿಳಿಕೆರೆ ಹೈವೇ ರಸ್ತೆಯ ಪಕ್ಕದಲ್ಲೇ ಕೂರುತ್ತಿದ್ದ ಅನಾಥ ವೃದ್ಧೆ (75 ವರ್ಷ)ಯನ್ನು ರಕ್ಷಿಸಿ ವೃದ್ಧಾಶ್ರಮಕ್ಕೆ ಸೇರಿಸಲು ಅಧಿಕಾರಿಗಳಿಗೆ ಸೂಚಿಸಿದ ನಿಂಗರಾಜ್ ಮಲ್ಲಾಡಿ.

ಬಿಳಿಕೆರೆ ಹೈವೇ ರಸ್ತೆಯ ಪಕ್ಕದಲ್ಲೇ ಕೂರುತ್ತಿದ್ದ ಅನಾಥ ವೃದ್ಧೆ (75 ವರ್ಷ)ಯನ್ನು ರಕ್ಷಿಸಿ ವೃದ್ಧಾಶ್ರಮಕ್ಕೆ ಸೇರಿಸಲು ಅಧಿಕಾರಿಗಳಿಗೆ ಸೂಚಿಸಿದ ನಿಂಗರಾಜ್ ಮಲ್ಲಾಡಿ.

2025-12-19  Mysore Desk  56 views
ಬಿಳಿಕೆರೆ ಹೈವೇ ರಸ್ತೆಯ ಪಕ್ಕದಲ್ಲೇ ಕೂರುತ್ತಿದ್ದ ಅನಾಥ ವೃದ್ಧೆ (75 ವರ್ಷ)ಯನ್ನು ರಕ್ಷಿಸಿ ವೃದ್ಧಾಶ್ರಮಕ್ಕೆ ಸೇರಿಸಲು ಅಧಿಕಾರಿಗಳಿಗೆ ಸೂಚಿಸಿದ ನಿಂಗರಾಜ್ ಮಲ್ಲಾಡಿ.

ಬಿಳಿಕೆರೆ ಹೈವೇ ರಸ್ತೆಯ ಪಕ್ಕದಲ್ಲೇ ಕೂರುತ್ತಿದ್ದ ಅನಾಥ ವೃದ್ಧೆ (75 ವರ್ಷ)ಯನ್ನು ರಕ್ಷಿಸಿ ವೃದ್ಧಾಶ್ರಮಕ್ಕೆ ಸೇರಿಸಲು ಅಧಿಕಾರಿಗಳಿಗೆ ಸೂಚಿಸಿದ ನಿಂಗರಾಜ್ ಮಲ್ಲಾಡಿ.

ಬಿಳಿಕೆರೆ. 

ಹುಣಸೂರು ತಾಲ್ಲೂಕು ಬಿಳಿಕೆರೆ ಹೈವೆ ರಸ್ತೆಯ ಪಕ್ಕದಲ್ಲೇ ಯಾವಾಗಲೂ ಕೂರುತ್ತಿದ್ದ ಅನಾಥ ವೃದ್ಧೆಯನ್ನು ಇಂದು ದಿನಾಂಕ:19-12-2025 ರಂದು ಶುಕ್ರವಾರ ದಸಂಸ   ಮುಖಂಡ ನಿಂಗರಾಜ್ ಮಲ್ಲಾಡಿ ಮೈಸೂರಿನಿಂದ ತಮ್ಮ ವಾಹನದಲ್ಲಿ ಬರುವಾಗ ನೋಡಿ ಅಪಾಯವಾಗುವುದನ್ನು ಅರಿತು ರಸ್ತೆಯ ಪಕ್ಕದಿಂದ ರಕ್ಷಿಸಿ ಬಿಳಿಕೆರೆ ಮಂಜು ಮತ್ತು ಅವರ ಸ್ನೇಹಿತರ ಸಹಕಾರದಿಂದ  ವೃದ್ಧೆಯನ್ನು ರಸ್ತೆಯ ಪಕ್ಕದಲ್ಲಿದ್ದ ಮನೆಯ ಹೋಟೆಲೊಂದರ ಬಳಿ ಕುಳ್ಳಿರಿಸಿ ಟೀ ಕೊಟ್ಟು ಸಂತೈಸಲಾಯಿತು. 

ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ನಿಂಗರಾಜ್ ಮಲ್ಲಾಡಿ ರವರು ಮಾತನಾಡಿ ನಮ್ಮ ಸಮಾಜದಲ್ಲಿ ಹೆತ್ತ ತಾಯಿಯನ್ನು ದೇವರ ಸ್ಥಾನದಲ್ಲಿ ಇಟ್ಟಿದ್ದೇವೆ. ಆದರೆ ಇಂತಹ ವಯಸ್ಸಾದ ವೃದ್ಧೆಯನ್ನು ಸಂಬಂಧಿಕರು ಈ ರೀತಿ ರಸ್ತೆಯ ಪಕ್ಕದಲ್ಲೇ ಮಲಗುವ ಸ್ಥಿತಿಗೆ ತಂದಿರುವುದು ಅತ್ಯಂತ ನೋವಿನ ವಿಚಾರವಾಗಿದೆ. ಇಂತಹ ವಯಸ್ಸಾದ ವೃದ್ಧೆಯರನ್ನು ಹೆತ್ತ ಮಕ್ಕಳೇ ಪ್ರಾಣಿ ಪಕ್ಷಿಗಳ ರೀತಿ ಬೀದಿಗೆ ಬಿಡುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ. ಈ ಅನಾಥ ವೃದ್ಧೆಯು ಬಿಳಿಕೆರೆ ಹೈವೆ ರಸ್ತೆಯ ಪಕ್ಕದಲ್ಲೇ ಯಾವಾಗಲೂ ಕುಳಿತಿರುತ್ತಾರೆ ಎಂಬ ವಿಷಯವು ಬಿಳಿಕೆರೆ ಮಂಜು ಮತ್ತು ಸಂಗಡಿಗರಿಂದ ತಿಳಿಯಿತು. ಹೈವೆ ರಸ್ತೆಯಲ್ಲಿ ಭಾರೀ ವಾಹನಗಳು ಎಡೆಬಿಡದೆ ಚಲಿಸುವುದರಿಂದ ಇದೇ ರೀತಿ ಈ ವೃದ್ಧೆ ರಸ್ತೆಯ ಪಕ್ಕದಲ್ಲೇ ಕುಳಿತುಕೊಂಡರೆ ಅಪಘಾತವಾಗಿ ಸಾವು ಸಂಭವಿಸುವ ಅಪಾಯವಿದೆ. ಈ ಅನಾಥ ವೃದ್ಧೆಯನ್ನು ರಸ್ತೆ ಬದಿಯಿಂದ ರಕ್ಷಿಸಿ ಸಂತೈಸಿದ ನಂತರ ಈ ಅನಾಥ ವೃದ್ಧೆಯ ಪರಿಸ್ಥಿತಿಯನ್ನು ಹುಣಸೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಹರೀಶ್ ರವರಿಗೆ ದೂರವಾಣಿ ಕರೆ ಮಾಡಿ  ಈ ಅನಾಥ ವೃದ್ಧೆಯನ್ನು ನಿಮ್ಮ ಇಲಾಖೆಯ ಸಹಕಾರದಿಂದ ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸುವಂತೆ ಕೇಳಿಕೊಳ್ಳಲಾಯಿತು. ಇಂತಹ ಅನಾಥ ವೃದ್ಧೆಯರನ್ನು ಬೀದಿಗೆ ತಳ್ಳುವ ಸಂಬಂಧಿಕರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸುವಂತಾಗಬೇಕು ಎಂದು ಒತ್ತಾಯಿಸಿದರು. 

ನಮ್ಮ ಮನವಿಗೆ ಸಿ.ಡಿ.ಪಿ.ಓ ಹರೀಶ್ ರವರು ಸ್ಪಂದಿಸಿ ಈ ಅನಾಥ ವೃದ್ಧೆಯನ್ನು ನಮ್ಮ ಸಿಬ್ಬಂಧಿಗಳ ಸಹಕಾರದಿಂದ ವೈದ್ಯಕೀಯ ತಪಾಸಣೆ ಮಾಡಿಸಿ ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುತ್ತಾರೆ. 

ಬಿಳಿಕೆರೆ ಗ್ರಾಮದ ಅನಾಥರ ಸೇವಾಕಾರ್ಯವನ್ನು ಮಾಡುತ್ತಿರುವ ಬಿಳಿಕೆರೆ ಮಂಜು  ಮಾತನಾಡಿ ಈ ಅನಾಥ ವೃದ್ಧೆಯು ಹಲವಾರು ದಿನಗಳಿಂದ ಹೈವೇ ರಸ್ತೆಯ ಪಕ್ಕದಲ್ಲೇ ಕುಳಿತುಕೊಳ್ಳುತ್ತದೆ. ನಾವು ಎಷ್ಟೇ ಹೇಳಿದರೂ ಈ ಸ್ಥಳ ಬಿಟ್ಟು ಹೋಗುವುದೇ ಇಲ್ಲ. ಇದೇ ರೀತಿ ಹೈವೇ ರಸ್ತೆಯಲ್ಲೇ ವೃದ್ಧೆ ಕುಳಿತುಕೊಂಡರೆ ಯಾವುದಾದರೂ ವಾಹನ ಅಪಘಾತ ಮಾಡುವ ಸಂದರ್ಭ ಹೆಚ್ಚಿರುತ್ತದೆ.  ಈ ದಿನ ನಿಂಗರಾಜ್ ಮಲ್ಲಾಡಿ ಅಣ್ಣನವರು ಮೈಸೂರಿನಿಂದ ಹುಣಸೂರಿಗೆ ಬರುವಾಗ ಈ ಅನಾಥ ವೃದ್ಧೆಯ ಸ್ಥಿತಿಯನ್ನು ನೋಡಿ ಗಾಭರಿಗೊಂಡು ತಮ್ಮ ವಾಹನ ನಿಲ್ಲಿಸಿ ನಮ್ಮನ್ನು ಕರೆದು ಈ ವೃದ್ಧೆಗೆ ಮುಂದೆ ಆಗುವ ಅನಾಹುತವನ್ನು ತಪ್ಪಿಸಿದ್ದಾರೆ. ಮಲ್ಲಾಡಿ ಅಣ್ಣನವರ ಸಮಯ ಪ್ರಜ್ಞೆ ಮತ್ತು ಮಾನವೀಯತೆಯ ಗುಣಗಳು ಸಮಾಜಕ್ಕೆ ಒಂದು ಮಾದರಿಯಾಗಿದೆ. ಇವರ ಬಗ್ಗೆ ನಮಗೆ ಅಪಾರ ಗೌರವವಿದೆ. ಇವರು ತಿಳಿಸಿರುವಂತೆ ಅಧಿಕಾರಿಗಳ ಸಹಕಾರದಿಂದ ನಾವುಗಳು ಸಹ  ಈ ಅನಾಥ ವೃದ್ಧೆಯನ್ನು ವೃದ್ಧಾಶ್ರಮಕ್ಕೆ ಸೇರಿಸಲು ಸಹಾಯ ಮಾಡುತ್ತೇವೆ ಎಂದರು.  

ಈ ಸಂದರ್ಭದಲ್ಲಿ ಹೊಸಳ್ಳಿ ಶೇಖರ, ಸವಿತಾ ಸಮಾಜದ ಉಪಾಧ್ಯಕ್ಷರಾದ ಜಲೇಂದ್ರ ಮುಂತಾದವರು ಹಾಜರಿದ್ದರು.


Share: