ವಿರಾಜಪೇಟೆ.
ಸುಂದರ ವಿರಾಜಪೇಟೆ ಸ್ವಚ್ಛ ಪಟ್ಟಣ ಎಂಬ ಧ್ಯೇಯ ವಾಕ್ಯದೊಂದಿಗೆ ಇಂದು ಪುರಸಭೆ ವತಿಯಿಂದ ಪಟ್ಟಣವನ್ನು ಸ್ವಚ್ಛವಾಗಿಡಲು ಹಾಗೂ ಬೀದಿಯಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲು ಸಾಮಾಜಿಕ ಜಾಲತಾಣವಾದ ಫೆಸ್ ಬುಕ್ ನಲ್ಲಿ ಕ್ಲೀನ್ ವಿರಾಜಪೇಟೆ ಎಂಬ ಖಾತೆಯನ್ನು ತೆರೆಯಲಾಗಿದ್ದು ಈ ಅಧಿಕೃತ ಖಾತೆಯನ್ನು ಮಾನ್ಯ ಶಾಸಕರಾದ ಶ್ರೀ ಎ ಎಸ್ ಪೊನ್ನಣ್ಣ ಅವರು ಉದ್ಘಾಟಿಸಿ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಸ್ಕ್ಯಾನರ್ ಅಥವಾ ಲಿಂಕ್ ಡೌನ್ಲೋಡ್ ಮಾಡಿಕೊಂಡು ಛಾಯಾಚಿತ್ರವನ್ನು ತೆಗೆದು ಪೋಸ್ಟ್ ಮಾಡಬಹುದಾಗಿದೆ ನಿಮ್ಮ ಪೋಸ್ಟನ್ನು ಅನುಸರಿಸಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ದೇಶನ ನೀಡಿದರು.
ಫೇಸ್ಬುಕ್ ಪೇಜ್ ಲಿಂಕ್ ಈ ಕೆಳಗಿನಂತಿದೆ
ಕಳೆದ ಕೆಲವು ವರ್ಷಗಳ ಹಿಂದೆ ರಾಜ್ಯದಲ್ಲಿ ಸ್ವಚ್ಚತೆಯಲ್ಲಿ ನಾಲ್ಕನೇ ಸ್ಥಾನ ವಿರಾಜಪೇಟೆ ನಗರದ ಹೆಸರಿತ್ತು.
ಪಟ್ಟಣದ ಸಾರ್ವಜನಿಕರು ಪುರಸಭೆಯೊಂದಿಗೆ ಕೈಜೋಡಿಸಬೇಕಾಗಿ ಅವರು ಮಾಹಿತಿ ನೀಡಿದರು. ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ದೇಚಮ್ಮ ಕಾಳಪ್ಪ, ಸದಸ್ಯರಾದ ಮತೀನ್ ಎಸ್ ಹೆಚ್, ರಾಜೇಶ್ ಪದ್ಮನಾಭ, ಮೊಹಮ್ಮದ್ ರಾಫಿ, ಪುರಸಭೆ ಮುಖ್ಯಾಧಿಕಾರಿ ನಾಚಪ್ಪ, ಪರಿಸರ ಅಭಿಯಂತರರಾದ ರೀತು ಸಿಂಗ್, ಪುರಸಭೆ ಸಿಬ್ಬಂದಿ ಕೊಮಲ ಮತ್ತು ಪಕ್ಷದ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.