One Tap News - Kannada News Daily

Header
collapse
...
Home / Mysore / ಅಲೆಮಾರಿ ಕುಟುಂಬದ ಮದುವೆಗೆ ಸಹಾಯ ನೀಡಿದ ಡಿ.ಸಿ.ಪಿ.ಸುಂದರ್ ರಾಜ್

ಅಲೆಮಾರಿ ಕುಟುಂಬದ ಮದುವೆಗೆ ಸಹಾಯ ನೀಡಿದ ಡಿ.ಸಿ.ಪಿ.ಸುಂದರ್ ರಾಜ್

2025-11-30  Mysore Desk  93 views
ಅಲೆಮಾರಿ ಕುಟುಂಬದ ಮದುವೆಗೆ ಸಹಾಯ ನೀಡಿದ ಡಿ.ಸಿ.ಪಿ.ಸುಂದರ್ ರಾಜ್

ಮೈಸೂರು. 

ಅಲೆಮಾರಿ ಕುಟುಂಬದ ಮಗಳ ಮದುವೆಗೆ ಊಟದ ವ್ಯವಸ್ಥೆ ಮಾಡಿಸಿದ ಡಿ.ಸಿ.ಪಿ.ಸುಂದರ್ ರಾಜ್
ಮೈಸೂರಿನ ಏಕಲವ್ಯ ನಗರದಲ್ಲಿ ವಾಸವಿರುವ ಅಲೆಮಾರಿ ದೊಂಬಿದಾಸ ಸಮುದಾಯಕ್ಕೆ ಸೇರಿದ ಶ್ರೀನಿವಾಸ ಮತ್ತು ಭಾಗ್ಯ ದಂಪತಿಗಳ ಮಗಳಾದ ಅಶ್ವಿನಿಯ ಮದುವೆಗೆ ದಿನಾಂಕ : 30-11-2025 ರ ಭಾನುವಾರ ಮೈಸೂರು ನಗರದ ಹೆಬ್ಬಾಳ್ ನಲ್ಲಿರುವ ಲಕ್ಷ್ಮಿಕಾಂತ ದೇವಸ್ಥಾನದಲ್ಲಿ ಮದುವೆಯ ಶುಭ ಕಾರ್ಯವು ನಡೆದಿದ್ದು ಈ ಮದುವೆಗೆ ಮೈಸೂರು ನಗರದ ಡಿ.ಸಿ.ಪಿ ಸಾಹೇಬರಾದ ಸುಂದರ್ ರಾಜ್ ರವರು ಊಟದ  ವ್ಯವಸ್ಥೆಯನ್ನು ಮಾಡಿಸಿಕೊಟ್ಟರು.

ಈ ಬಗ್ಗೆ ದಸಂಸ ಮುಖಂಡರಾದ ನಿಂಗರಾಜ್ ಮಲ್ಲಾಡಿ ಮಾತನಾಡಿ ಶ್ರೀನಿವಾಸ ಭಾಗ್ಯ ದಂಪತಿಗಳ ಏಕೈಕ ಪುತ್ರಿ ಅಶ್ವಿನಿಯ ಮದುವೆಯು ಹುಣಸೂರು ತಾಲ್ಲೂಕು ಕುಪ್ಪೆ ಗ್ರಾಮದ ದತ್ತ ಸಾವಿತ್ರಮ್ಮ ದಂಪತಿಯ ಮಗನಾದ ಪುಟ್ಟರಾಜು ಎಂಬುವರ ಜೊತೆ ದಿನಾಂಕ : 30-11-2025 ರ ಭಾನುವಾರ ನಿಶ್ಚಿತವಾಗಿತ್ತು. ಆದರೆ ವಧುವಿನ ತಂದೆ ಶ್ರೀನಿವಾಸ ಮತ್ತು ಭಾಗ್ಯ ದಂಪತಿಗಳು ಮಗಳ ಮದುವೆಗೆ ಹಣಕಾಸಿನ ತೊಂದರೆಯಿಂದ ಅವರಿವರ ಬಳಿ ಸಾಲ  ಕೇಳಿ, ಸಾಲವು ಸಿಗದೆ ಇತ್ತ ಮಗಳ ಮದುವೆಯನ್ನು ಹೇಗೆ ಮಾಡುವುದೆಂಬ ಕೊರಗಿನಲ್ಲಿ ಆತಂಕಕ್ಕೊಳಗಾಗಿದ್ದರು. ಮೊದಲೇ ಕಿತ್ತು ತಿನ್ನುವ ಬಡತನದಲ್ಲಿದ್ದ ಈ ಅಲೆಮಾರಿ ಕುಟುಂಬದ ಮಗಳ ಮದುವೆಗೆ ಯಾರೂ ಸಾಲ ಕೊಡಲು ಮನಸ್ಸು ಮಾಡಲಿಲ್ಲ. ಇತ್ತ ಮಗಳ ಮದುವೆಯ ದಿನಾಂಕ ಹತ್ತಿರವಿರುವುದರಿಂದ ಮಗಳ ಮದುವೆಯ ಊಟದ ವ್ಯವಸ್ಥೆಗೂ ಪರಿತಪಿಸುವ ಸ್ಥಿತಿಯಲ್ಲಿ ಇದ್ದರು. ಈ ವಿಷಯವು ಅಲೆಮಾರಿ ಮುಖಂಡ ವೆಂಕಟೇಶನಿಂದ ದಸಂಸ ದ ಗಮನಕ್ಕೆ ಬಂದಿತ್ತು.

ಈ ಬಗ್ಗೆ ಅವರ ಮನೆಗೆ ಹೋಗಿ ಪರಿಶೀಲಿಸಲಾಗಿ ಈ ಅಲೆಮಾರಿ ಕುಟುಂಬವು ಹಣಕಾಸಿಲ್ಲದೆ ತುಂಬಾ ಕಷ್ಟದಲ್ಲಿರುವುದು ತಿಳಿದು ನಿಮ್ಮ ಮಗಳ ಮದುವೆಗೆ ಬರುವ ಜನರಿಗೆ ಊಟದ ವ್ಯವಸ್ಥೆಯನ್ನು ದಾನಿಗಳ ಸಹಾಯದಿಂದ ಮಾಡಿಸಿಕೊಡುತ್ತೇವೆಂದು ದಸಂಸವು ಈ ದಂಪತಿಗಳಿಗೆ ಧೈರ್ಯತುಂಬಿತು. ಈ ವಿಷಯವನ್ನು ಮೈಸೂರು ನಗರದ ಪೊಲೀಸ್ ಉಪ ಪೊಲೀಸ್ ಆಯುಕ್ತರಾದ ಸುಂದರ್ ರಾಜ್ ಸಾಹೇಬರಿಗೆ ಈ ಅಲೆಮಾರಿ ಕುಟುಂಬದ ಪರಿಸ್ಥಿತಿಯನ್ನು ವಿವರಿಸಿ ಇವರ ಮಗಳ ಮದುವೆಗೆ ಊಟದ ವ್ಯವಸ್ಥೆಯನ್ನು ಮಾಡಿಕೊಡುವಂತೆ ಕೇಳಿಕೊಂಡಿತ್ತು. ಬಡತನ, ನೋವು, ಹಸಿವಿನ ಬಗ್ಗೆ ಅರಿವಿದ್ದ ಸುಂದರ್ ರಾಜ್ ಸಾಹೇಬರು ನಮ್ಮ ಮನವಿಗೆ ಸ್ಪಂದಿಸಿ ಎನ್ ಆರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ರವರಿಗೆ ಫೋನ್ ಕರೆ ಮಾಡಿ ಅಲೆಮಾರಿ ಕುಟುಂಬದ ಮಗಳ ಮದುವೆಗೆ ಊಟದ ವ್ಯವಸ್ಥೆಯನ್ನು ಮಾಡಿ ಈ ಕುಟುಂಬದ ಶುಭ ಕಾರ್ಯ ಕ್ಕೆ ನೆರವಾಗಬೇಕೆಂದು ತಿಳಿಸಿದರು.  

ನಂತರ ಪೊಲೀಸ್ ಇನ್ಸ್ಪೆಕ್ಟ ರ್ ಲಕ್ಷ್ಮಿಕಾಂತ್ ತಳವಾರ್ ರವರನ್ನು ಹುಡುಗಿಯ ತಂದೆ ಶ್ರೀನಿವಾಸ್ ರವರ ಜೊತೆ ಭೇಟಿ ಮಾಡಿದಾಗ ಸಾಹೇಬರು ನನಗೆ ಹೇಳಿದ್ದಾರೆ.  ಇದು ನಿಮ್ಮಮಗಳ ಮದುವೆಯಲ್ಲ. ನಮ್ಮ ಮಗಳ ಮದುವೆ. ಈ ಮದುವೆಗೆ ಬೇಕಾದ ಊಟದ ವ್ಯವಸ್ಥೆಯನ್ನು ನಾವೇ ಮಾಡಿಸುತ್ತೇವೆ. ಚಿಂತಿಸಬೇಡಿ ಎಂದು ಹೇಳಿ ಅದೇ ತಕ್ಷಣ ಕ್ಯಾಟ್ರೀನ್ ರವರಿಗೆ ಫೋನ್ ಕರೆ ಮಾಡಿ ಮದುವೆಗೆ ಬೇಕಾದ ಊಟದ ವ್ಯವಸ್ಥೆನ್ನು ಅಚ್ಚುಕಟ್ಟಾಗಿ ಮಾಡಿಕೊಡಬೇಕು. ಯಾವುದಕ್ಕೂ ಕೊರತೆ ಇರಬಾರದು ಎಂದು ತಿಳಿಸಿದರು. ಇವರ ಮಾತನ್ನು ಕೇಳಿದ ನಾನು ಮತ್ತು ಶ್ರೀನಿವಾಸ ಸಮಾಧಾನದಿಂದ ನಿಟ್ಟುಸಿರು ಬಿಟ್ಟೆವು.

ಶ್ರೀನಿವಾಸನು ಬಾವುಕನಾಗಿ ಕೈ ಮುಗಿದ ಕೃತಜ್ಞತೆಯಿಂದ ಇನ್ಸ್ಪೆಕ್ಟರ್ ರವರ ಕಾಲಿಗೆ ಬೀಳಲು ಹೋದಾಗ ಆತನನ್ನು ಎರಡೂ ಕೈಗಳಿಂದ ಎತ್ತಿ ಏಕೆ ಕಾಲಿಗೆ ಬೀಳುತ್ತೀಯಪ್ಪಾ. ಏಳು ಮೇಲೆ ಎಂದು ಆತನನ್ನು ಸಮಾಧಾನ ಪಡಿಸಿ ತಬ್ಬಿಕೊಂಡ ಆ ಸನ್ನಿವೇಶವು ತಾಯಿಯು ಮಗನನ್ನು ಸಂತೈಸುವಂತಿತ್ತು. 
ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ರವರು ಮಾತನಾಡಿ ಈ ಬಡ ಕುಟುಂಬಕ್ಕೆ ಸಹಾಯ ಮಾಡಿಸಲು ಶ್ರಮಿಸಿದ ದಲಿತ ಮುಖಂಡರಾದ ನಿಂಗರಾಜ್ ಮಲ್ಲಾಡಿ ರವರ ಈ ಕಾರ್ಯವು ಬಹಳ ಮಹತ್ವವಾದದ್ದು ಎಂದರು.


ಈ ಸಂದರ್ಭದಲ್ಲಿ ಯಾಚೆಗೌಡನಹಳ್ಳಿ ಗ್ರಾಮದ ಯಜಮಾನರು ಹಾಗೂ ಹಿರಿಯರಾದ ತಮ್ಮಣ್ಣಯ್ಯ ರವರು ಮಾತನಾಡಿ ನಿಂಗರಾಜ್ ಮಲ್ಲಾಡಿ ರವರು ತಮ್ಮ ಮನೆಯ ಮಗಳ ಮದುವೆಯ ರೀತಿಯಲ್ಲಿ ಮದುವೆಯ ಶುಭ ಕಾರ್ಯಕ್ಕೆ ಬಂದ ಜನರನ್ನು ಪ್ರೀತಿಯಿಂದ ಕರೆದು ವಿಚಾರಿಸಿ ಅವರೇ ಊಟ ಬಡಿಸಿ ಈ ಶುಭ ಕಾರ್ಯವನ್ನು ನಡೆಸಿ ಕೊಟ್ಟಿರುವುದು ನಮಗೆ ಸಂತಸ ತಂದಿದ್ದು ಇವರಿಗೆ ನಮ್ಮ ಅಲೆಮಾರಿ ಸಮುದಾಯಗಳ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು

ಈ ಶುಭ ಕಾರ್ಯ ದಲ್ಲಿ ಕೆ. ನಂಜಪ್ಪ ಬಸವನಗುಡಿ, ಏಕಲವ್ಯ ನಗರದ ಅಲೆಮಾರಿ ಸಮಾಜದ ಮುಖಂಡರುಗಳಾದ  ವೆಂಕಟೇಶ, ವೈ ಕುಮಾರ, ಗ್ರಾಮ ಪಂಚಾಯತಿ ಸದಸ್ಯರಾದ ಮಂಗಳ ವೆಂಕಟೇಶ್, ರೇವಣ್ಣ, ಕುಪ್ಪೆ ಗ್ರಾಮದ ವರನ ಕಡೆಯ ಗ್ರಾಮಸ್ಥರಾದ ಯಜಮಾನ್ ನಾರಾಯಣಯ್ಯ, ಶ್ರೀನಿವಾಸಯ್ಯ ಶಾನುಭೋಗನಹಳ್ಳಿ ಯಜಮಾನರಾದ ರೇವಣ್ಣ ಮುಂತಾದವರು ಅಶ್ವಿನಿ ಮತ್ತು ಪುಟ್ಟರಾಜು ದಂಪತಿಗಳನ್ನು ಶುಭ ಹಾರೈಸಿ ಸಂತೃಪ್ತಿಯಿಂದ ಊಟ ಮಾಡಿದರು. 
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ದಸಂಸದ ಮನವಿಗೆ ಸ್ಪಂದಿಸಿ ಈ ಬಡ ಕುಟುಂಬಕ್ಕೆ ಊಟದ ವ್ಯವಸ್ಥೆ ಮಾಡಿದ ಸುಂದರರಾಜ್ ಸಾಹೇಬರು ಹಾಗೂ ಎನ್ ಆರ್ ಸ್ಟೇಷನ್ ನ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

“ *ಬೇರೆಯವರ ಕಷ್ಟಕ್ಕೆ ನೆರವಾಗುವ ಗುಣ ನಿಮ್ಮಲ್ಲಿದ್ದರೆ, ನೀವು ನಂಬಿರುವ ದೇವರೇ ನಿಮ್ಮ ಮನೆ ಬಾಗಿಲಿಗೆ ಬರುವನು”*


Share: