One Tap News - Kannada News Daily

Header
collapse
...
Home / Kodagu / ವಿಶ್ವದಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ, ಮೌಲ್ಯ ಹಾಗೂ ಗೌರವ ಗಳಿಸಿದ ಕೀರ್ತಿ ಹಿಂದೂ ಧರ್ಮಕ್ಕಿದೆ. ಗೋ ಪ್ರಮುಖಂ ಸಂಚಾಲಕರಾದ ಗಂಗಾಧರ್ ಪೆಡುಂಮಕ್ಕಿ

ವಿಶ್ವದಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ, ಮೌಲ್ಯ ಹಾಗೂ ಗೌರವ ಗಳಿಸಿದ ಕೀರ್ತಿ ಹಿಂದೂ ಧರ್ಮಕ್ಕಿದೆ. ಗೋ ಪ್ರಮುಖಂ ಸಂಚಾಲಕರಾದ ಗಂಗಾಧರ್ ಪೆಡುಂಮಕ್ಕಿ

2026-02-04  Kodagu Desk  24 views
ವಿಶ್ವದಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ, ಮೌಲ್ಯ ಹಾಗೂ ಗೌರವ ಗಳಿಸಿದ ಕೀರ್ತಿ ಹಿಂದೂ ಧರ್ಮಕ್ಕಿದೆ. ಗೋ ಪ್ರಮುಖಂ ಸಂಚಾಲಕರಾದ ಗಂಗಾಧರ್ ಪೆಡುಂಮಕ್ಕಿ

✍️ ರಜಿತ ಕಾರ್ಯಪ್ಪ

ವಿರಾಜಪೇಟೆ:

ವಿಶ್ವದಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ, ಮೌಲ್ಯ ಹಾಗೂ ಗೌರವ ಗಳಿಸಿದ ಕೀರ್ತಿ ಹಿಂದೂ ಧರ್ಮಕ್ಕಿದೆ. ಇಂದು ಪ್ರಪಂಚದಾದ್ಯಂತ ಹಿಂದೂ ಧರ್ಮದ ಆಚಾರ, ವಿಚಾರಗಳ ಬಗ್ಗೆ ಎಲ್ಲರಲ್ಲೂ ಆಸಕ್ತಿ ಮೂಡುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೋ ಪ್ರಮುಖಂ ಸಂಚಾಲಕರಾದ ಗಂಗಾಧರ್ ಪೆಡುಂಮಕ್ಕಿ ಅಭಿಪ್ರಾಯಪಟ್ಟರು.

    ವಿರಾಜಪೇಟೆ ಕೆದಮುಳ್ಳುರು ಗ್ರಾಮದ ತೆರ್ಮೆಮೊಟ್ಟೆಯಲ್ಲಿ ಕೆದಮುಳ್ಳುರು ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು ಪ್ರತಿಯೊಬ್ಬ ವ್ಯಕ್ತಿಯೂ ತಾನು ಹಿಂದೂ ಎಂಬ ಆತ್ಮವಿಶ್ವಾಸವನ್ನು ಗೌರವದಿಂದ ಪ್ರದರ್ಶಿಸಬೇಕಾಗಿದೆ. ಹಲವಾರು ವರ್ಷಗಳಿಂದ ಹಿಂದೂ ಸಮಾಜದ ಮೇಲೆ ಆಕ್ರಮಣ ಮಾಡುವಂತಹ ಕೃತ್ಯಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಹಿಂದೂ ಸಮಾಜ ಇಂದು ಅತ್ಯಂತ ವಿಶಾಲವಾಗಿ, ಸದೃಢವಾಗಿ ಬೆಳೆದಿದೆ. ತನ್ನ ವಿರುದ್ಧ ನಡೆಯುವ ಎಲ್ಲ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವ ಶಕ್ತಿ ಸಾಮರ್ಥ್ಯ ಹಿಂದೂ ಸಮಾಜಕ್ಕಿದೆ. ಇಂದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ತಾನು ಸಹ ಹಿಂದೂ ಧರ್ಮದವನು ಎಂದು ಹೇಳಿಕೊಳ್ಳುವ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಯಾವುದೇ ಸಂದರ್ಭದಲ್ಲಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಸಮಾಜದ ಸಂಘಟನೆಗಾಗಿ ಸದೃಢರಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

1002115273.jpg

   ಹಿಂದೂ ಧರ್ಮ ಸಮಾನತೆಯನ್ನು ಸಾರುವ ಧರ್ಮವಾಗಿದೆ. ಸಂಸ್ಕöÈತಿ, ಸಂಸ್ಕಾರ, ಸಂವೇದನೆ, ಭ್ರಾತೃತ್ವ, ಗೌರವ, ಗೋಪೂಜೆ ಮುಂತಾದ ಧರ್ಮ ಪ್ರೇರಣೆಯಾಗುವ ಕಾರ್ಯಕ್ರಮಗಳು ಮಾತ್ರ ನಮ್ಮಲ್ಲಿ ನಡೆಯುತ್ತಿವೆ. ವಿಶಾಲವಾದ ಹಿಂದೂ ಧರ್ಮದ ಮರ್ಮವನ್ನು ಅರಿಯುವ ಕಾರ್ಯ ವ್ಯವಸ್ಥಿತವಾಗಿ ನಡೆದಿಲ್ಲ. ಅನೇಕ ಧರ್ಮ ಸಂಸ್ಕೃತಿಗಳು ಜೀವಿಸಿ ಕಣ್ಮರೆಯಾದ ನಿರ್ಧೇಶನಳಿವೆ. ಯಾವ ಧರ್ಮ ಪ್ರಾರಂಭ ತಿಳಿದಲ್ಲವೊ, ಅಂತ್ಯ ಕಾಣುವುದಿಲ್ಲವೋ ಅದೇ ಸನಾತನ ಧರ್ಮ ಹಿಂದೂ ಧರ್ಮ. ಈ ಮಣ್ಣಿನ ಧೀಮಂತ ಸಂಸ್ಕೃತಿ ಉಳಿವಿಗಾಗಿ ಆಚರಣೆಗಳು ಹಬ್ಬ ಹರಿದಿನಗಳು ಸಂಸ್ಕೃತಿಗಳನ್ನು ಮರೆಯದೆ ಪಾಲಿಸುವಂತಾಗಬೇಕು. ಹಿಂದೂ ಸಂಸ್ಕೃತಿ ಆರ್.ಎಸ್.ಎಸ್ ಪರಿಚಯ ಮಾಡಲಿಲ್ಲಾ ಬದಲಿಗೆ ದೇವಾದಿ ದೇವತೆಗಳು ಸೃಷ್ಟಿ ಮಾಡಿದ ಪುಣ್ಯಭೂಮಿ ಇದು. ಇಲ್ಲಿ ಹುಟ್ಟಿರುವ ನಾವು ಪುಣ್ಯವಂತರು. ಆಚರಣೆಗಳು, ಸಂಸ್ಕೃತಿ, ದೇಶ, ರಾಷ್ಟೃ ಜಾಗೃತಿಗಾಗಿ ಸಮಾಜ ಸಂಘಟನೆಗಾಗಿ ಆರ್.ಎಸ್.ಎಸ್ ಜಾಗೃತಿಯ ಕಾರ್ಯನಿರ್ವಹಿಸಕೊಂಡು ತನ್ನ ೧೦೦ ವರ್ಷ ಪೂರೈಸಿದೆ. ಧರ್ಮ ಚಿಂತನೆ, ರಾಷ್ಠೃ ಭಕ್ತಿ, ಜಾಗೃತ ಸಮಾಜ ಉದ್ದಾರಕ್ಕೆ ಸಮಾಜದ ಪ್ರತಿಯೋಬ್ಬರು ನಿರ್ಮಾತೃರಾಗಬೇಕು ಎಂದು ಹೇಳಿದರು.

   ಮುಖ್ಯವಾಗಿ ಕೊಡವರು ಈ ಮಣ್ಣಿನ ಮಕ್ಕಳು. ಅಂದಿನಿAದ ಇಂದಿನವರೆಗೆ ದೇಶವನ್ನು ಕಾಯುವ ಕೆಲಸ ಮಾಡುತ್ತಿದ್ದಾರೆ. ಭಾರತ ಮಾತೆ ಜಗಜನನಿ ಆಗಬೇಕು. ಭಾರತ ದೇಶ ಜಗದ್ಗುರು ಆಗಬೇಕು ಎಂಬ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ೨೫೦ಕ್ಕೂ ಅಧಿಕ ದೇಶವಿದ್ದರೂ ಸುಮಾರು ಐವತ್ತಕ್ಕೂ ದೇಶಗಳಲ್ಲಿ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಶಾಖೆ ಇದೆ. ಹೆಚ್ಚು ದೇಶದಲ್ಲಿ ಸಂಘದ ವಿಚಾರಗಳು ಅರಿವಾಗುತ್ತಿದೆ. ಆದರಿಂದ ನಾವೆಲ್ಲರೂ ಒಂದಾಗಿ ಇಂದು ಸಂಗಮದಲ್ಲಿ ಸಂಕಲ್ಪ ಮಾಡೋಣ ನಮ್ಮ ಧರ್ಮ ನಮ್ಮ ಸಂಸ್ಕöÈತಿ ಉಳಿಸಲು ಕೈಜೋಡಿಸೋಣ ಎಂದು ಹೇಳಿದರು.

   ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪೊನ್ನಂಪೇಟೆ ಅರಣ್ಯ ಕಾಲೇಜಿನ ಪ್ರಾದ್ಯಾಪಕರಾದ ಡಾ. ಜವರೇಗೌಡ ಅವರು ಪರಿಸರದ ಬಗ್ಗೆ ಕಾಳಜಿ ಕುರಿತು ಮಾತನಾಡಿ ಸಮರ್ಥ ಸತ್ವ ಹೊಂದಿರುವ ಸದೃಢ ದೇಶ ಭಾರತ. ದೇಶದ ಬೆನ್ನೆಲುಬು ರೈತ. ಅನ್ನ ಕೊಡುವ ರೈತನಿಗೆ, ಗಡಿ ಕಾಯುವ ಸೈನಿಕನ ಪರವಾಗಿಯೂ ನಾವು ಪ್ರಾರ್ಥನೆ ಮಾಡಬೇಕು. ಯುವ ಸಮೂಹವನ್ನು ಸನ್ಮಾರ್ಗದತ್ತ ಕರೆದೊಯ್ಯುವ ಕೆಲಸವಾಗಬೇಕು. ನಮ್ಮ ಪರಿಸರವನ್ನು ನಾವು ಕಾಪಾಡಿಕೊಳ್ಳಬೇಕು. ಪರಿಸರದ ಬಗ್ಗೆ ಕಾಳಜಿ ಇಲ್ಲದೆ ಹೋದಲ್ಲಿ ಮುಂದಿನ ಪೀಳಿಗೆ ಭವಿಷ್ಯ ಕಳೆದುಕೊಳ್ಳಬೇಕಾಗುತ್ತದೆ. ಯುವ ಜನತೆ ಜಾಗೃತರಾಗುವುದರೊಂದಿಗೆ ರಾಷ್ಟç ಮತ್ತು ಪರಿಸರ ಕಟ್ಟುವ ಕೆಲಸ ನಿರ್ವಹಿಸಬೇಕು ಎಂದು ಹೇಳಿದರಲ್ಲದೆ ಕೊಡಗಿನ ಪರಿಸರ, ದೇವರಕಾಡು ಹಾಗೂ ಅರಣ್ಯದ ಬಗ್ಗೆ ಮಾತನಾಡಿದರು.

   ಹಿಂದೂ ಸಂಗಮ ಆಯೋಜನಾ ಸಮಿತಿ ಸಂಯೋಜಕರಾದ ಎಂ.ಎಂ. ಪರಮೇಶ್ವರ ಮಾತನಾಡಿ, ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಉತ್ಸಾಹ ಇದೆ, ಆವೇಶ ಇಲ್ಲ. ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಂದ ಹೊರಗೆ ಬರಬೇಕಾದರೆ ನಾವು ಇನ್ನಷ್ಟು ದೃಢ ನಿರ್ಧಾರ ಕೈಗೊಳ್ಳಬೇಕಿದೆ. ನಮ್ಮ ಧರ್ಮ, ಸಂಸ್ಕöÈತಿಯನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯತೆ ಆಗಿದೆ. ಜಗತ್ತಿನ ಎಲ್ಲ ಕ್ಷೇತ್ರಕ್ಕೂ ಕೊಡುಗೆ ನೀಡಿರುವುದು ಹಿಂದೂ ಸಮಾಜ ಎಂದರು.

1002115276.jpg

     ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ದೀಪ ಪ್ರಜ್ವಲನೆಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ತೆರ್ಮೆಮೊಟ್ಟೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಿಂದ ಆರಂಭವಾದ ಶೋಭಾಯಾತ್ರೆಯು ತೆರ್ಮೆಮೊಟ್ಟೆ ಮೈಧಾನದಲ್ಲಿ ಕೊನೆಗೊಂಡಿತ್ತು. ಪೂರ್ಣಕುಂಭ ಸ್ವಾಗತದೊಂದಿಗೆ ಗ್ರಾಮದ ಹಿಂದೂ ಭಾಂದವರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.

   ಇದೇ ಸಂದರ್ಭ ಸ್ಥಳೀಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಥಳೀಯ ಪ್ರತಿಭೆಗಳಿಗೆ ಪಂಚಾಯತ್ ಸದಸ್ಯ ಕೆ.ಆರ್. ರಾಮಯ್ಯ ಪ್ರತಿಭಾ ಪುರಸ್ಕಾರ ನೀಡಿದರು.

 ಆಯೋಜನಾ ಸಮಿತಿಯ ಸಂಚಾಲಕರಾದ ಮಾಳೇಟಿರ ಸನ್ನಿ ಕಾರ್ಯಪ್ಪ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಫ್ರೀ ಉತ್ತಪ್ಪ, ಅಮ್ಮುಣಿಚಂಡ ರಂಜನ್ ನಂಜಪ್ಪ, ಉಪನ್ಯಾಸಕಿ ಚೈತ್ರ ಜಿ.ಟಿ. ಹಿಂದೂ ಸಂಗಮ ಆಯೋಜನಾ ಸಮಿತಿಯ ಸದಸ್ಯರು ಕಾರ್ಯಕರ್ತರು, ಸ್ಥಳೀಯ ದೇವಸ್ಥಾನ ಸಮಿತಿ ಮುಖಂಡರು, ಸಂಘ ಸಂಸ್ಥೆಯ ಪ್ರಮುಖರು, ಶ್ರೀ ವಿನಾಯಕ ಸೇವಾ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ದಾನಿಗಳು, ಸ್ಥಳೀಯ ಹಿರಿಯರು, ಮಹಿಳೆಯರು, ಸರ್ವ ಜನಾಂಗದ ಪ್ರಮುಖರು ಹಾಗೂ ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಹಾಲಿ ಹಾಗೂ ಮಾಜಿ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು. 


Share: