One Tap News - Kannada News Daily

Header
collapse
...
Home / Mysore / ಹುಣಸೂರು ಉಪವಿಭಾಗಾಧಿಕಾರಿಯಾಗಿ ಕಾವ್ಯ ರಾಣಿ ನೇಮಕ

ಹುಣಸೂರು ಉಪವಿಭಾಗಾಧಿಕಾರಿಯಾಗಿ ಕಾವ್ಯ ರಾಣಿ ನೇಮಕ

2025-12-06  Mysore Desk  229 views
ಹುಣಸೂರು ಉಪವಿಭಾಗಾಧಿಕಾರಿಯಾಗಿ ಕಾವ್ಯ ರಾಣಿ ನೇಮಕ

ಹುಣಸೂರು. 

ಶಿರಸಿಯಲ್ಲಿ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕು. ಕಾವ್ಯ ರಾಣಿ(ಕೆ.ಎ.ಎಸ್) ಅವರನ್ನು ಸರ್ಕಾರವು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ ಹೊರಡಿಸಿರುವ ವರ್ಗಾವಣಾ ಆದೇಶದಲ್ಲಿ ಈ ಬದಲಾವಣೆ ಮಾಡಲಾಗಿದೆ. ಕಾವ್ಯ ರಾಣಿ ಅವರು ಶಿರಸಿ ಉಪವಿಭಾಗದಲ್ಲಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಆಡಳಿತದ ಕ್ಷೇತ್ರಗಳಲ್ಲಿ ಹಲವಾರು ಬದಲಾವಣೆಗಳನ್ನು ತಂದಿದ್ದರು ಸಾರ್ವಜನಿಕ ಸ್ನೇಹಿ ಆಡಳಿತ, ತ್ವರಿತ ಪ್ರಕರಣ ಇತ್ಯರ್ಥ, ಮತ್ತು ಪ್ರಾಮಾಣಿಕತೆ ವ್ಯಕ್ತಿತ್ವಕ್ಕೆ ಸ್ಥಳೀಯರಿಂದ ಮೆಚ್ಚುಗೆ ಪಡೆದಿದ್ದರು. ಸಾರ್ವಜನಿಕರಿಗೆ ಸುಲಭ ಲಭ್ಯತೆ, ವಿವಿಧ ಇಲಾಖೆಗಳಲ್ಲಿ ಸಮನ್ವಯ, ದೂರು ಪರಿಹಾರದಲ್ಲಿ ತ್ವರಿತ ಕ್ರಮ ಇತ್ಯಾದಿ ವಿಚಾರಗಳಲ್ಲಿ ಅವರು ತೋರಿದ ಕಾರ್ಯಕ್ಕೆ ಜಿಲ್ಲೆಯ ಮಟ್ಟದಲ್ಲಿಯೂ ಶ್ಲಾಘನೆ ವ್ಯಕ್ತವಾಗಿತ್ತು.

1001919202.jpg

ಹೊಸ ವರ್ಗಾವಣಾ ಆದೇಶದ ಪ್ರಕಾರ ಅವರನ್ನು ಮೈಸೂರು ಜಿಲ್ಲೆ ಹುಣಸೂರು ಉಪವಿಭಾಗದ ಉಪವಿಭಾಗಾಧಿಕಾರಿ ಆಗಿ ನೇಮಕ ಮಾಡಲಾಗಿದೆ. ಶಿರಸಿ ಉಪವಿಭಾಗ ವ್ಯಾಪ್ತಿಯಲ್ಲಿ ಅವರ ಸೇವೆಯನ್ನು ಮೆಚ್ಚಿಕೊಂಡ ನಾಗರಿಕರು, ಜನಪ್ರತಿನಿಧಿಗಳು ಮತ್ತು ಸಹೋದ್ಯೋಗಿಗಳು ಶುಭಾಶಯಗಳನ್ನು ವ್ಯಕ್ತಪಡಿಸಿದ್ದಾರೆ.


Share: