One Tap News - Kannada News Daily

Header
collapse
...
Home / Kodagu / ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟದ 12 ನೇ ವರ್ಷದ ಕೊಡವ ನಮ್ಮೆಗೆ ನವೆಂಬರ್‌ 6 ರಂದು (ನಾಳೆ) ಚಾಲನೆ

ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟದ 12 ನೇ ವರ್ಷದ ಕೊಡವ ನಮ್ಮೆಗೆ ನವೆಂಬರ್‌ 6 ರಂದು (ನಾಳೆ) ಚಾಲನೆ

2025-11-05  Kodagu Desk  14 views
ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟದ 12 ನೇ ವರ್ಷದ ಕೊಡವ  ನಮ್ಮೆಗೆ  ನವೆಂಬರ್‌ 6 ರಂದು (ನಾಳೆ) ಚಾಲನೆ

ವಿರಾಜಪೇಟೆ. 

ನವೆಂಬರ್‌ 6 ರಿಂದ 9 ರವರೆಗೆ ನಡೆಯಲಿರುವ ಕೊಡವ ನಮ್ಮೆ 
ಕೊಡವ ಸಮಾಜ ಒಕ್ಕೂಟದಿಂದ  ನಾಳೆ ಬೆಳಿಗ್ಗೆ 8.30 ಗಂಟೆಗೆ ಬಾಳುಗೋಡು ಹಾಕಿ ಮೈದಾನದ ಸಮೀಪವಿರುವ  ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಸುಸಜ್ಜಿತಗೊಂಡಿರುವ ಹಾಕಿ ಮೈದಾನದಲ್ಲಿ  ಚಾಲನೆ ದೊರೆಯಲಿದೆ.
ಮುಖ್ಯ ಅತಿಥಿಗಳಾಗಿ ಮೈಸೂರು -ಕೊಡಗು ಸಂಸದರಾದ ಯದುವೀರ್‌ ಒಡೆಯರ್‌ , ಮುಖ್ಯಮಂತ್ರಿ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷರಾದ ಚೆಪ್ಪುಡೀರ ಅರುಣ್ ಮಾಚಯ್ಯ ಹಾಗೂ   ಮಾಜಿ ಸಚಿವ ಎಂ.ಸಿ ನಾಣಯ್ಯ , ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟ ದ ಹಿಂದಿನ ಅಧ್ಯಕ್ಷರಾದ ಬೆಳ್ಳಿಯ್ಯಪ್ಪ, ಎಲ್ಲಾ ಕೊಡವ ಸಮಾಜಗಳ ಅಧ್ಯಕ್ಷರು ಪದಾಧಿಕಾರಿಗಳು, ಬಾಳುಗೋಡು ಫೆಡರೇಶನ್‌ ಕೊಡವ ಸಮಾಜದ ಮಹಿಳಾ ವಿಂಗ್ಸ್‌  ಅಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದಾರೆ ಎಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ  ಮಾಹಿತಿ ನೀಡಿದರು. 


Share: