One Tap News - Kannada News Daily

Header
collapse
...
Home / Kodagu / ಅನಧಿಕೃತ ಸ್ಟಾಕ್ ಯಾರ್ಡ್ ಗಳನ್ನು ಮುಚ್ಚಿಸಲು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅಧಿಕಾರಿಗಳಿಗೆ ಸೂಚನೆ.

ಅನಧಿಕೃತ ಸ್ಟಾಕ್ ಯಾರ್ಡ್ ಗಳನ್ನು ಮುಚ್ಚಿಸಲು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅಧಿಕಾರಿಗಳಿಗೆ ಸೂಚನೆ.

2025-10-12  Kodagu Desk  146 views
ಅನಧಿಕೃತ ಸ್ಟಾಕ್ ಯಾರ್ಡ್ ಗಳನ್ನು ಮುಚ್ಚಿಸಲು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅಧಿಕಾರಿಗಳಿಗೆ ಸೂಚನೆ.

ವಿರಾಜಪೇಟೆ. 

ವಿರಾಜಪೇಟೆಯ ಲಾರಿ ಮಾಲಿಕರು ಹಾಗೂ ಚಾಲಕರ ಸಂಘದವರು ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರನ್ನು ಭೇಟಿಯಾಗಿ ತಮ್ಮ ಮನವಿಯನ್ನು ಸಲ್ಲಿಸಿದರು.    

ಶಾಸಕರ ಗೃಹ ಕಚೇರಿಗೆ ತೆರಳಿದ ಸಂಘದವರು ವಿರಾಜಪೇಟೆ ಭಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಸಾಮಗ್ರಿ ಹಾಗೂ ಇತರ ವಸ್ತುಗಳನ್ನು ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ಒದಗಿಸಿದರು. ಇದರಿಂದಾಗಿ ಸರ್ಕಾರಕ್ಕೆ ಮಾತ್ರವಲ್ಲದೆ ಅಧಿಕೃತ ಲಾರಿ ವ್ಯವಹಾರಕ್ಕೂ ತೊಂದರೆಯಾಗುತ್ತದೆ ಎಂದು ಶಾಸಕರ ಗಮನಕ್ಕೆ ತಂದರು.    

ಇವರ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ ಶಾಸಕರು ಕೂಡಲೇ ಸಂಭಂದಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಈ ರೀತಿಯ ಅನಧಿಕೃತ ಕೇಂದ್ರ ಗಳನ್ನು ಮುಚ್ಚಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಸದಸ್ಯ ಮತೀನ್, ಮಹಮ್ಮದ್ ರಾಫಿ, ಯುತ್ ಬ್ಲಾಕ್ ಪ್ರೆಸಿಡೆಂಟ್ ಪಟ್ಟಡ ರಕ್ಷಿತ್ ಹಾಗೂ ಲಾರಿ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳಾದ ಸುಮಂತ್, ವಲ್ಸನ್, ಸಲೀಂ, ರಿಜ್ವಾನ್, ಪಳನಿ,ರಾಜಿಕ್, ರೆಹಮಾನ್, ವಾಜಿದ್, ಉಪಸ್ಥಿತರಿದ್ದರು.


Share: