One Tap News - Kannada News Daily

Header
collapse
...
Home / State News / ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಜಿ. ಡಿ ಹರೀಶ್ ಗೌಡ ಅವಿರೋಧ ಆಯ್ಕೆ. ಮತ್ತೆ ರಾಜ್ಯ ಸರ್ಕಾರಕ್ಕೆ ಮುಖಭಂಗ.

ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಜಿ. ಡಿ ಹರೀಶ್ ಗೌಡ ಅವಿರೋಧ ಆಯ್ಕೆ. ಮತ್ತೆ ರಾಜ್ಯ ಸರ್ಕಾರಕ್ಕೆ ಮುಖಭಂಗ.

2025-10-11  Mysore Desk  239 views
ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಜಿ. ಡಿ ಹರೀಶ್ ಗೌಡ ಅವಿರೋಧ ಆಯ್ಕೆ. ಮತ್ತೆ ರಾಜ್ಯ ಸರ್ಕಾರಕ್ಕೆ ಮುಖಭಂಗ.

 

ಮೈಸೂರು. 

ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಹುಣಸೂರಿನ ಜೆಡಿಎಸ್ ಶಾಸಕರಾದ ಸನ್ಮಾನ್ಯ ಶ್ರೀ ಜಿ. ಡಿ ಹರೀಶ್ ಗೌಡರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಮೈಸೂರು ಜಿಲ್ಲೆಯ ಸಹಕಾರ ಕ್ಷೇತದಲ್ಲಿ ನಾನೇ ಕಿಂಗ್ ಮೇಕರ್ ಎಂದು ಮತ್ತೇ ನಿರೂಪಿಸಿದ್ದಾರೆ. ಮುಖ್ಯಮಂತ್ರಿ ತನ್ನ ತವರು ಕ್ಷೇತ್ರದಲ್ಲಿ ಮತ್ತೆ ಸೋತಿದ್ದಾರೆ. 

ಕೆಲವೇ ತಿಂಗಳ ಹಿಂದೆ ಮೈಸೂರು ಜಿಲ್ಲಾ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಸರಕಾರದ ವಿರುದ್ಧ ಏಕಾಂಗಿಯಾಗಿ ಎದುರಿಸಿ ಸರ್ಕಾರಕ್ಕೆ ನಡುಕ ಹುಟ್ಟಿಸಿದರು. ಸ್ವತಃ ಸಚಿವ ರಾಜಣ್ಣರವರೆ ನಾನು ಹರೀಶ ಸೋಲಿಸಲು ಒಂದಷ್ಟು ಸೊಸೈಟಿಗಳನ್ನು ಕೊನೆ ಕ್ಷಣದಲ್ಲಿ ಸೇರಿಸಿದ್ದೆ ಎಂದು ಒಪ್ಪಿಕೊಂಡಿದ್ದರು. ಆದರೂ ಕೇವಲ ಒಂದು ಮತಗಳಿಂದ ಕೆಲವು ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರು. ಈಗ ಮತ್ತೊಮ್ಮೆ ಮುಖ್ಯಮಂತ್ರಿ ತವರೂರಲ್ಲಿ ಸಹಕಾರ ಕ್ಷೇತ್ರದಲ್ಲಿ ನಾನೆ ಕಿಂಗ್ ಎಂದು ತೋರಿಸಿದ್ದಾರೆ. 


Share: