One Tap News - Kannada News Daily

Header
collapse
...
Home / Mysore / ತಂಬಾಕು ಬೆಲೆಯ ಕುಸಿತದ ಬಗ್ಗೆ ಚರ್ಚಿಸಲು ರಾಜ್ಯ ರೈತ ಸಂಘ ಜಿಲ್ಲಾ ಸಮಿತಿಯಿಂದ ಪೂರ್ವಭಾವಿ ಸಭೆ.

ತಂಬಾಕು ಬೆಲೆಯ ಕುಸಿತದ ಬಗ್ಗೆ ಚರ್ಚಿಸಲು ರಾಜ್ಯ ರೈತ ಸಂಘ ಜಿಲ್ಲಾ ಸಮಿತಿಯಿಂದ ಪೂರ್ವಭಾವಿ ಸಭೆ.

2025-12-08  Mysore Desk  80 views
ತಂಬಾಕು ಬೆಲೆಯ ಕುಸಿತದ ಬಗ್ಗೆ ಚರ್ಚಿಸಲು ರಾಜ್ಯ ರೈತ ಸಂಘ ಜಿಲ್ಲಾ ಸಮಿತಿಯಿಂದ ಪೂರ್ವಭಾವಿ ಸಭೆ.

ಹುಣಸೂರು. 

ತಂಬಾಕು ಬೆಲೆಯ ಕುಸಿತದ ಬಗ್ಗೆ ಚರ್ಚಿಸಲು ರಾಜ್ಯ ರೈತ ಸಂಘದ ವತಿಯಿಂದ ಪೂರ್ವಭಾವಿ ಸಭೆ 

ತಂಬಾಕು ಬೆಲೆಯ ಕುಸಿತದ ಬಗ್ಗೆ ಚರ್ಚಿಸಲು ದಿ : 12-12-2025ರ ಶುಕ್ರವಾರದಂದು ಬೆಳಿಗ್ಗೆ 10.00 ಗಂಟೆಗೆ ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಪ್ಲಾಟ್‌ಫಾರಂ ರೈತ ಭವನದಲ್ಲಿ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ. 

ಈಗಾಗಲೇ ಕರ್ನಾಟಕದಲ್ಲಿ 20 ಮಿಲಿಯನ್‌ ತಂಬಾಕು ಮಾರಾಟವಾಗಿದ್ದು, ಉಳಿದ 50 ರಿಂದ 60 ಮಿಲಿಯನ್‌ ತಂಬಾಕು ಮಾರಾಟವಾಗಬೇಕಿದ್ದು, ರೈತರ ನಿರೀಕ್ಷೆಯಂತೆ ಬೆಲೆ ಸಿಗದೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ತಂಬಾಕು ಬೆಳೆಗಾರರು ಮುಂದಿನ ಹೋರಾಟವನ್ನು ರೂಪಿಸಲು ಎಲ್ಲಾ ಫ್ಲಾಟ್‌ಫಾರಂಗಳ ತಂಬಾಕು ಬೆಳೆಗಾರರು ಆಗಮಿಸಿ ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಕೊಡುವ ಮೂಲಕ ಉತ್ತಮ ಬೆಲೆಗಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. 

ಈ ಸಭೆಗೆ ಮೈಸೂರು ಮತ್ತು ಪಿರಿಯಾಪಟ್ಟಣದ ಪ್ರಾದೇಶಿಕ ವ್ಯವಸ್ಥಾಪಕರನ್ನು ಸಹ ಆಹ್ವಾನಿಸಿ ತಂಬಾಕು ಬೆಳೆಗಾರರ  ಅಹವಾಲುಗಳನ್ನು ಅವರಿಗೆ ತಿಳಿಯಪಡಿಸಿ ಮಂಡಳಿಯ ಅಭಿಪ್ರಾಯವನ್ನು ಪಡೆಯಲು ತೀರ್ಮಾನಿಸಲಾಗುವುದು. ಆದ್ದರಿಂದ ಮೇಲ್ಕಂಡ ದಿನಾಂಕದಂದು ತಂಬಾಕು ಬೆಳೆಗಾರರು, ಮುಖಂಡರು ಹಾಗೂ ರೈತರು ಆಗಮಿಸಬೇಕಾಗಿ ಕೋರಿಕೊಳ್ಳುತ್ತೇವೆ. 

ಈ ಸಭೆಗೆ ಎಲ್ಲಾ ರೈತಬಾಂಧವರು, ತಂಬಾಕು ಬೆಳೆಗಾರರು ಆಗಮಿಸಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷರಾದ ಹೊಸೂರು ಕುಮಾರ್,  ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್‌ ರಾಜೇ ಅರಸ್, ತಾಲ್ಲೂಕು ಅಧ್ಯಕ್ಷರಾದ ಬೆಂಕಿಪುರ ಚಿಕ್ಕಣ್ಣ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮೋದೂರು ಶಿವಣ್ಣ, ಗೌರವಾಧ್ಯಕ್ಷರಾದ ಉಂಡವಾಡಿ ಚಂದ್ರೇಗೌಡ,   ತಂಬಾಕು ಬೆಳೆಗಾರರಾದ ನಾಗರಾಜಪ್ಪ ಬೀಜಗನಹಳ್ಳಿ, ಧನಂಜಯ ಕಿರಿಜಾಜಿ, ಪ್ರಭಾಕರ ನಿಲುವಾಗಿಲು, ಅಶೋಕ್‌ ಕಟ್ಟೆಮಳಲವಾಡಿ, ಶ್ರೀಧರ್‌ ಕಟ್ಟೆಮಳಲವಾಡಿ, ಮೊತ್ತ ಬಸವರಾಜಪ್ಪ, ಈರೇಗೌಡ ರಾಮನಾಥಪುರ,  ಯೋಗಣ್ಣ ಅರಕಲಗೂಡು, ಪಿರಿಯಾಪಟ್ಟಣ ತಂಬಾಕು ಬೆಳೆಗಾರರಾದ ಪ್ರಕಾಶ್‌ ರಾಜು ದಶರಥ, ಚೆಲುವಯ್ಯ, ಮಹದೇವು ಕಟ್ಟೆಮಳಲವಾಡಿ, ಕಾಳೇಗೌಡ ಅಣ್ಣೂರು, ತಂಬಾಕು ಬೆಳೆಗಾರರು ಹಾಗೂ ರೈತ ಸಂಘದ ಅಧ್ಯಕ್ಷರಾದ ಕೊಣಸೂರು ಆನಂದ್‌ ಮುಂತಾದವರು ಮಾಧ್ಯಮದ ಮೂಲಕ ಮನವಿ ಮಾಡಿಕೊಂಡಿದ್ದುಹಾಗೂ ಮಾಧ್ಯಮ ಮಿತ್ರರೂ ಸಹ ಈ ಸಭೆಗೆ ಆಗಮಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.


Share: