One Tap News - Kannada News Daily

Header
collapse
...
Home / Kodagu / ತ್ರೋಬಾಲ್ ನಲ್ಲಿ ಸರ್ವದೈವತ ಶಾಲೆಯ ಬಾಲಕ-ಬಾಲಕಿಯರ ತಂಡ ವಿಭಾಗ ಮಟ್ಟಕ್ಕೆ ಆಯ್ಕೆ.

ತ್ರೋಬಾಲ್ ನಲ್ಲಿ ಸರ್ವದೈವತ ಶಾಲೆಯ ಬಾಲಕ-ಬಾಲಕಿಯರ ತಂಡ ವಿಭಾಗ ಮಟ್ಟಕ್ಕೆ ಆಯ್ಕೆ.

2025-11-04  Kodagu Desk  72 views
ತ್ರೋಬಾಲ್ ನಲ್ಲಿ ಸರ್ವದೈವತ ಶಾಲೆಯ ಬಾಲಕ-ಬಾಲಕಿಯರ ತಂಡ ವಿಭಾಗ ಮಟ್ಟಕ್ಕೆ ಆಯ್ಕೆ.

🏐 ವಿಭಾಗ ಮಟ್ಟಕ್ಕೆ ಆಯ್ಕೆಯಾದ ಸರ್ವದೈವತ ಪ್ರೌಢಶಾಲೆಯ ಬಾಲಕ ಬಾಲಕಿಯರ ತ್ರೋಬಾಲ್ ತಂಡ. 

ಕುಶಾಲನಗರ. 

ಇಂದು ಕುಶಾಲನಗರದ ಕೂಡಿಗೆಯಲ್ಲಿ ನಡೆದ ಪ್ರೌಢಶಾಲಾ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ವಿರಾಜಪೇಟೆ ತಾಲೂಕನ್ನು ಪ್ರತಿನಿಧಿಸಿದ್ದ ಸರ್ವದೈವತ ಪ್ರೌಢಶಾಲೆಯ ಬಾಲಕ ಮತ್ತು ಬಾಲಕಿಯರ ತ್ರೋಬಾಲ್‌ ತಂಡಗಳು ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಇದೀಗ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.ವಿಜೇತ ತಂಡಕ್ಕೆದೈಹಿಕ ಶಿಕ್ಷಕ ಪ್ರಮೋದ್ ಗೌಡ ತರಬೇತಿ ನೀಡಿರುತ್ತಾರೆ.

ಸರ್ವದೈವತ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ದೈಹಿಕ ಶಿಕ್ಷಕರಿಗೆ ಮತ್ತು ತಂಡದ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ಹಂತದಲ್ಲೂ ಉತ್ತಮ ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ.


Share: