One Tap News - Kannada News Daily

Header
collapse
...
Home / Kodagu / ವಿರಾಜಪೇಟೆ ಕೊಡವ ಸಮಾಜದ ವತಿಯಿಂದ ಸ್ವಚ್ಚತಾ ಆಂದೋಲನ.

ವಿರಾಜಪೇಟೆ ಕೊಡವ ಸಮಾಜದ ವತಿಯಿಂದ ಸ್ವಚ್ಚತಾ ಆಂದೋಲನ.

2025-10-15  Kodagu Desk  107 views
ವಿರಾಜಪೇಟೆ ಕೊಡವ ಸಮಾಜದ ವತಿಯಿಂದ ಸ್ವಚ್ಚತಾ ಆಂದೋಲನ.

ವಿರಾಜಪೇಟೆ. 

ಕೊಡವ ಸಮಾಜದ ಅದ್ಯಕ್ಷರಾದ ರವಿ ಉತ್ತಪ್ಪ ಉಪಾಧ್ಯಕ್ಷ ರಾದ ಕಾಣತಂಡ ಜಗದೀಶ್ ,ತ್ರಿವೇಣಿ ಶಾಲೆಯ ವಿದ್ಯಾರ್ಥಿಗಳು ವಿರಾಜಪೇಟೆಯ ಚಿಕ್ಕಪೇಟೆ ಮುಖ್ಯ ರಸ್ತೆಯಲ್ಲಿ ಇಂದು ಸ್ವಚ್ಚತೆ ಮಾಡಿದರು. ನಮ್ಮ ಕೊಡಗು ಸ್ವಚ್ಛ ಕೊಡಗು ನಮ್ಮ ಕಸ ನಮ್ಮ ಹೊಣೆ ಎಂಬ ವೇದ ಘೋಷಣೆಯೊಂದಿಗೆ ಸ್ವಚ್ಛತಾ ಕಾರ್ಯವನ್ನು ಮಾಡಿದರು.

ಈ ಸಂದರ್ಭದಲ್ಲಿ ವಿರಾಜಪೇಟೆ ಕೊಡವ ಸಮಾಜದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕೊಡಗು ಕಲಾವಿದರ ಸಂಘದವತಿಯಿಂದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಚೇನಂಡ ಗಿರೀಶ್ ಪೂವಯ್ಯ. ರವಿ ಉತ್ತಪ್ಪ, ಹಾಗೂ ತ್ರಿವೇಣಿ ಶಾಲೆ ಯ ಮುಖ್ಯ ಶಿಕ್ಷಕಿ ಮಂಡೆಂಪಂಡ ಧನಲಕ್ಮಿ  ಮಾತನಾಡಿ ಈ ಕಾರ್ಯಕ್ರಮ ಇಂದು ಒಂದು ದಿನಕ್ಕೆ ಸೀಮಿತವಾಗದೆ ಕೊಡವ ಸಮಾಜದ ವತಿಯಿಂದ ಪ್ರತಿ ತಿಂಗಳು ಕೂಡ ಈ ರೀತಿಯ ಸ್ವಚ್ಚತಾ ಕಾರ್ಯಕ್ರಮಗಳು ನಡೆಯುತ್ತದೆ ಎಂದು ತಿಳಿಸಿದರು.

ರವಿ ಕುಮಾರ್ 


Share: