One Tap News - Kannada News Daily

Header
collapse
...
Home / Mysore / ಶಾಲಾ ವಿಜ್ಞಾನ ಪ್ರದರ್ಶನದಲ್ಲಿ ಟ್ಯಾಲೆಂಟ್ ಶಾಲಾ ವಿದ್ಯಾರ್ಥಿಗಳ ಪ್ರತಿಭೆ ಅನಾವರಣ.

ಶಾಲಾ ವಿಜ್ಞಾನ ಪ್ರದರ್ಶನದಲ್ಲಿ ಟ್ಯಾಲೆಂಟ್ ಶಾಲಾ ವಿದ್ಯಾರ್ಥಿಗಳ ಪ್ರತಿಭೆ ಅನಾವರಣ.

2025-10-31  Mysore Desk  188 views
ಶಾಲಾ ವಿಜ್ಞಾನ ಪ್ರದರ್ಶನದಲ್ಲಿ ಟ್ಯಾಲೆಂಟ್ ಶಾಲಾ ವಿದ್ಯಾರ್ಥಿಗಳ ಪ್ರತಿಭೆ ಅನಾವರಣ.

 

ಹುಣಸೂರು. 

 ಹುಣಸೂರು ನಗರದ ಟ್ಯಾಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಇಂದು ವಿಜ್ಞಾನ ಪ್ರದರ್ಶನವು ವಿಜ್ಞಾನಪ್ರಿಯ ವಾತಾವರಣದಲ್ಲಿ ಜರುಗಿತು. ಈ ಪ್ರದರ್ಶನವನ್ನು ಹುಣಸೂರು ಸಿ. ಟಿ ಆರ್ ಐ ನ  ವಿಜ್ಞಾನಿ  ಡಾ.ನಂದಾ ಸಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆ ಸಂಸ್ಥಾಪಕ ನಿರ್ದೇಶಕರಾದ ನವೀನ್ ರೈ, ಕೃಷ್ಣಮೂರ್ತಿ, ನಿರ್ದೇಶಕರಾದ ಮಂಜುನಾಥ್ ಆರ್ ಎನ್, ಶ್ರೀ ವಾಸು ಅಗಸ್ತ್ಯ ಫೌಂಡೇಶನ್, ಪ್ರಾಂಶುಪಾಲರಾದ ಮಂಜುನಾಥ್ ಎಂಟಿ ,  ಗುಲ್ಲ್ನಾಜ್ ಖಾನಂ, ಉಪಮುಖ್ಯ ಶಿಕ್ಷಕಿಯಾದಂತಹ ಶಶಿಕಲಾ ಎಸ್ ಎನ್, ಎಲ್ಲಾ ಶಿಕ್ಷಕ ವರ್ಗ ಹಾಜರಿದ್ದರು. 

1001792969.jpg

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಹುಣಸೂರು ಸಿ. ಟಿ ಆರ್ ಐ ನ  ವಿಜ್ಞಾನಿ  ಡಾ.ನಂದಾ ಸಿ ಅವರು “ವಿಜ್ಞಾನ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಹೊಸ ಆಲೋಚನೆ, ಸಂಶೋಧನಾ ಮನೋಭಾವ ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ಬೆಳೆಸುತ್ತದೆ. ಇಂತಹ ಪ್ರದರ್ಶನಗಳು ಭವಿಷ್ಯದ ವಿಜ್ಞಾನಿಗಳ ಬೆಳೆಸುವ ವೇದಿಕೆಯಾಗಿದೆ,” ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವನೆ ಬೆಳೆಸಬೇಕು, ಪ್ರಸ್ತುತ ಪರಿಸ್ಥಿತಿಯಲ್ಲಿ ವಿಜ್ಞಾನ ಮನುಷ್ಯನಿಗೆ ತುಂಬಾ ಅವಶ್ಯಕ. ಎಂದು ಹೇಳಿದರು.

1001792972.jpg

ಸಂಸ್ಥಾಪಕ ನಿರ್ದೇಶಕರಾದ ನವೀನ್ ರೈ ರವರು ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿಜ್ಞಾನವನ್ನು ಸುಲಭಮಾತ್ರದಲ್ಲಿ ಪಡೆದಲ್ಲಿ ಮಾತ್ರ ದೇಶದ ಬೆಳವಣಿಗೆ ಸಾಧ್ಯ, ಅದರಲ್ಲೂ ಹೆಣ್ಣು ಮಕ್ಕಳು ಈ ಕ್ಷೇತ್ರದಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು.

1001792975.jpg

 ಈ ಪ್ರದರ್ಶನದಲ್ಲಿ 8ನೇ ತರಗತಿಯಿಂದ 10ನೇ ತರಗತಿವರೆಗೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಟ್ಟು 55ಕ್ಕೂ ಹೆಚ್ಚು ವೈಜ್ಞಾನಿಕ ಮಾದರಿಗಳು ಪ್ರದರ್ಶಿಸಲ್ಪಟ್ಟಿದ್ದವು. ಪರಿಸರ ಸಂರಕ್ಷಣೆ, ನವೀಕರಿಸಬಹುದಾದ ಶಕ್ತಿ, ಸೌರಶಕ್ತಿ ಉಪಕರಣಗಳು, ಪ್ಲಾಸ್ಟಿಕ್ ಮರುಬಳಕೆ ತಂತ್ರಗಳು, ಕೃಷಿಯಲ್ಲಿ ಯಂತ್ರಗಳ ಬಳಕೆ, ಹಾಗೂ ರೋಬೋಟಿಕ್ಸ್ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಹೊಸ ಆವಿಷ್ಕಾರಗಳು ಪ್ರಮುಖ ಆಕರ್ಷಣೆಯಾಗಿದ್ದವು.

ವಿದ್ಯಾರ್ಥಿ ಆದಿತ್ಯ ಮತ್ತು ಮೋಹನ್  ತಯಾರಿಸಿದ “ಸ್ವಯಂ ಚಾಲಿತ ನೀರಾವರಿ ವ್ಯವಸ್ಥೆ” ಎಲ್ಲರ ಗಮನ ಸೆಳೆದಿತು. ಇದೇ ವೇಳೆ 9ನೇ ತರಗತಿಯ ವಿದ್ಯಾರ್ಥಿನಿ ಫಾರಿಯ ಬಾನು ತಯಾರಿಸಿದ “ನ್ಯೂಕ್ಲಿಯರ್ ಪವರ್ ಪಾಯಿಂಟ್ ಮಾದರಿ”ಗೆ ಪ್ರೇಕ್ಷಕರಿಂದ ಪ್ರಶಂಸೆ ದೊರಕಿತು.

1001792966.jpg

ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಶಿಕ್ಷಕರು , “ವಿದ್ಯಾರ್ಥಿಗಳು ತಮ್ಮ ಕಲ್ಪನೆಗೆ ಜೀವ ತುಂಬಿ ವಿಜ್ಞಾನವನ್ನು ಕ್ರೀಡೆಯಂತೆ ಅಳವಡಿಸಿಕೊಂಡಿದ್ದಾರೆ. ಇದು ನಮ್ಮ ಶಾಲೆಯ ಹೆಮ್ಮೆ” ಎಂದು ತಿಳಿಸಿದರು.

ಅಂತಿಮವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಬಹುಮಾನ ವಿತರಿಸಲಾಯಿತು.

ಪ್ರದರ್ಶನದ ಯಶಸ್ವಿಗೆ ಸಹಕರಿಸಿದ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಶಾಲಾ ಆಡಳಿತ ಮಂಡಳಿ ಧನ್ಯವಾದಗಳನ್ನು ತಿಳಿಸಿದೆ.


Share: