One Tap News - Kannada News Daily

Header
collapse
...
Home / Mysore / ಪೆಮ್ಮಂಡ ತೋಕ್ ನಮ್ಮೆಗೆ ವರ್ಣರಂಜಿತ ತೆರೆ, ನೆಲ್ಲಿರ ಚಾಂಪಿಯನ್, ತೀತಮಾಡ ರನ್ನರ್ಸ್.

ಪೆಮ್ಮಂಡ ತೋಕ್ ನಮ್ಮೆಗೆ ವರ್ಣರಂಜಿತ ತೆರೆ, ನೆಲ್ಲಿರ ಚಾಂಪಿಯನ್, ತೀತಮಾಡ ರನ್ನರ್ಸ್.

2025-10-21  Kodagu Desk  92 views
ಪೆಮ್ಮಂಡ ತೋಕ್ ನಮ್ಮೆಗೆ ವರ್ಣರಂಜಿತ ತೆರೆ, ನೆಲ್ಲಿರ ಚಾಂಪಿಯನ್, ತೀತಮಾಡ ರನ್ನರ್ಸ್.

 


ಪೊನ್ನಂಪೇಟೆ : 

ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ತೂಚಮಕೇರಿ ಪೆಮ್ಮಂಡ ಕುಟುಂಬಸ್ಥರು ಆಯೋಜಿಸಿರುವ ಮೊದಲನೇ ವರ್ಷದ ಕೊಡವ ಕೌಟುಂಬಿಕ ತೋಕ್ ನಮ್ಮೆಗೆ ವರ್ಣ ರಂಜಿತ ತೆರೆ ಎಳೆಯಲಾಯಿತು.


ಕ್ರೀಡಾಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಪೆಮ್ಮಂಡ ತೋಕ್ ನಮ್ಮೆಯ ಚಾಂಪಿಯನ್ ಆಗಿ ನೆಲ್ಲಿರ ಕುಟುಂಬ ಹೊರ ಹೊಮ್ಮಿದರೆ,  ತೀತಮಾಡ ಕುಟುಂಬ  ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

1001771085-1.jpg


ನೆಲ್ಲಿರ ಮತ್ತು ತೀತಮಾಡ ಕುಟುಂಬಗಳ ನಡುವೆ ನಡೆದ ಅಂತಿಮ ಸ್ಪರ್ಧೆಯ ಮೊದಲ ಅವಕಾಶದಲ್ಲಿ ಎರಡೂ ತಂಡಗಳೂ 1-1 ಸಮಬಲ ಸಾಧಿಸಿದವು. ಎರಡನೇ ಅವಕಾಶದಲ್ಲಿ ನೆಲ್ಲಿರ ತಂಡ 1-0 ಅಂತರದಿಂದ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.


ನೆಲ್ಲಿರ  ಧನು ಮತ್ತು ರಾಕೇಶ್ ಉತ್ತಮ ಗುರಿ ಪ್ರದರ್ಶನ ತೋರುವ ಮೂಲಕ ತಮ್ಮ ಕುಟುಂಬಕ್ಕೆ ಜಯತಂದುಕೊಟ್ಟರು.


ಗೆಲುವಿಗಾಗಿ ಉತ್ತಮ ಸ್ಪರ್ಧೆ ನೀಡಿದ ತೀತಮಾಡ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ತೀತಮಾಡ ಸೋನಿ ಮಾಚಯ್ಯ ಮತ್ತು ಯಶ್ವಿನ್ ತಮ್ಮ ತಂಡದ ಪರ ಉತ್ತಮ ಗುರಿ ಪ್ರದರ್ಶನ ತೋರಿದರು.


ಕೇಚಿರ ಕುಟುಂಬ (ಶಮನ್ ಮತ್ತು ಶಬದ್) 3 ನೇ ಸ್ಥಾನ, ಮಾಳೆಯಂಡ ಕುಟುಂಬ( ವಿಜು ಮತ್ತು ಅಪ್ಪಣ್ಣ)  4 ನೇ ಸ್ಥಾನ ಹಾಗೂ  5ನೇ ಸ್ಥಾನವನ್ನು ಮಾಳೆಯಂಡ  ಕುಟುಂಬ (ವಿಜು ಮತ್ತು ಸುಬ್ಬಯ್ಯ) ಪಡೆದುಕೊಂಡಿತು.

ಏರ್ ರೈಫಲ್ ಶೂಟಿಂಗ್ ನಲ್ಲಿ ಕುಟ್ಟoಡ ಅದಿತಿ ಮುತ್ತಮ್ಮ ಪ್ರಥಮ, ಬಡುವಂಡ ಮುತ್ತಪ್ಪ ದ್ವಿತೀಯ,  ಚೊಟ್ಟೆಕಾಳಪಂಡ ಎಂ.ಅಪ್ಪಣ್ಣ ತೃತೀಯ ಸ್ಥಾನ ಪಡೆದು ಕೊಂಡರು.
ಪೆಮ್ಮಂಡ ತೋಕ್ ನಮ್ಮೆಯಲ್ಲಿ 238 ತಂಡಗಳು ಸ್ಪರ್ಧೆಯಲ್ಲಿ ತಮ್ಮ ಗುರಿ ಪ್ರದರ್ಶನ ತೋರಿದವು.


ಇದೇ ಸಂದರ್ಭ 2026 ಕ್ಕೆ ತೋಕ್ ನಮ್ಮೆ ಆಯೋಜಿಸುವ ಆಲೆಮಾಡ ಕುಟುಂಬಸ್ಥರನ್ನು ಪೆಮ್ಮಂಡ ಕುಟುಂಬಸ್ಥರು ಸಾಂಪ್ರದಾಯಿಕ ಉಡುಪಿನಲ್ಲಿ ವಾಲಗದೊಂದಿಗೆ ಮೈದಾನಕ್ಕೆ ಕರೆತಂದು,  ರೋಲಿಂಗ್ ಟ್ರೋಫಿ ನೀಡಲಾಯಿತು.


ಸಮಾರೋಪ ಸಮಾರಂಭ:

ಪೆಮ್ಮಂಡ ಕುಟುಂಬದ ಹಿರಿಯರು ಹಾಗೂ ಕೊಡವ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಹಾಗೂ ಪೆಮ್ಮಂಡ ಕುಟುಂಬದ ಅಧ್ಯಕ್ಷ  ಪೆಮ್ಮಂಡ ಅರುಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಕ್ಕೆ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಅಂಜಿಕೇರಿನಾಡ್ ತಕ್ಕ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಮಾತನಾಡಿ ಕೊಡವಾಮೆಯನ್ನು ಬೆಳೆಸುವಲ್ಲಿ ಕ್ರೀಡೆಯು ಪ್ರಮುಖ ಪಾತ್ರವಹಿಸುತ್ತಿದೆ. ಕ್ರೀಡೆಯ ಮೂಲಕ ಎಲ್ಲಾ ಕುಟುಂಬಗಳು ಒಂದೇ ವೇದಿಕೆಯಲ್ಲಿ ಸೇರುವುದರಿಂದ ನಮ್ಮ ಭಾಷೆ, ಪದ್ಧತಿ, ಸಂಸ್ಕೃತಿಯ ಬೆಳವಣಿಗೆ ಸಹಕಾರಿ ಯಾಗುತ್ತಿದೆ ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ ಮಾತನಾಡಿದರು.


ಈ ಸಂದರ್ಭ ಅಂತರಾಷ್ಟ್ರೀಯ ಓಟಗಾರ ಪೆಮ್ಮಂಡ ಅಪ್ಪಯ್ಯ, ರಾಷ್ಟ್ರ ಪ್ರಶಸ್ತಿ ವಿಜೇತೆ ಪೆಮ್ಮಂಡ ಮಾಯಮ್ಮ ಅಪ್ಪಯ್ಯ, ಕಾಫಿ ಬೆಳೆಗಾರರಾದ ಪೆಮ್ಮಂಡ ಪದ್ಮ ಸುಬ್ರಮಣಿ, ಪೆಮ್ಮಂಡ ಸರಸ್ವತಿ ಬೋಪಯ್ಯ, ಪೆಮ್ಮಂಡ ರಾಜ ಕುಶಾಲಪ್ಪ, ಮಾಜಿ ಸೈನಿಕ ಪೆಮ್ಮಂಡ ಶ್ಯಾಮ್ ಪ್ರಸಾದ್, ಲಲಿತ ಪ್ರಸಾದ್, ಕ್ರೀಡಾಕೂಟ ಅಧ್ಯಕ್ಷ ಪೆಮ್ಮಂಡ ಪಿ.ಮಂಜು ಬೋಪಣ್ಣ, ಕ್ರೀಡಾ ಸಮಿತಿಯ ಪದಾಧಿಕಾರಿಗಳು, ಪೆಮ್ಮಂಡ ಕುಟುಂಬಸ್ಥರು ಹಾಜರಿದ್ದರು.


ಕಾರ್ಯಕ್ರಮದಲ್ಲಿ ಮೂಕಳೇರ ಕುಶಾಲಪ್ಪ, ಅಜ್ಜಿಕುಟ್ಟಿರ ಪ್ರಥ್ವಿ ಸುಬ್ಬಯ್ಯ, ಪೆಮ್ಮಂಡ ಅಪ್ಪಯ್ಯ, ಮಾಯಮ್ಮ, ಮಾಜಿ ಸೈನಿಕ ಪೆಮ್ಮಂಡ ಶ್ಯಾಮ್ ಪ್ರಸಾದ್, ಲಲಿತ, ರಾಜ ಕುಶಾಲಪ್ಪ, ಅಪ್ಪoಡೇರಂಡ ದಿನು, ಚೋನಿರ ಸೋಮಣ್ಣ, ಮಾಳೇಟಿರ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.


ಪೆಮ್ಮಂಡ ಪುಷ್ಪ ಪ್ರಾರ್ಥಿಸಿ, ಮಾಳೇಟಿರ ಶ್ರೀನಿವಾಸ್ ಮತ್ತು ಪೆಮ್ಮಂಡ ಇಂದಿರಾ ಬೋಪಣ್ಣ ಕಾರ್ಯಕ್ರಮ ನಿರೂಪಿಸಿದರು.

ವರದಿ : ಚೆನ್ನ ನಾಯಕ್


Share: