One Tap News - Kannada News Daily

Header
collapse
...
Home / State News / ಭಾಗಮಂಡಲದ ನಾಡಗೌಡ ಸಮುದಾಯ ಭವನಕ್ಕೆ 1 ಕೋಟಿ ಹಾಗೂ ಅರೆಬಾಷಿಕ ಗೌಡ ಜನಾಂಗಕ್ಕೆ ಜಾಗ ಮಂಜೂರು ಮಾಡಲು ಮುಖ್ಯಮಂತ್ರಿಗಳು ಭರವಸೆ

ಭಾಗಮಂಡಲದ ನಾಡಗೌಡ ಸಮುದಾಯ ಭವನಕ್ಕೆ 1 ಕೋಟಿ ಹಾಗೂ ಅರೆಬಾಷಿಕ ಗೌಡ ಜನಾಂಗಕ್ಕೆ ಜಾಗ ಮಂಜೂರು ಮಾಡಲು ಮುಖ್ಯಮಂತ್ರಿಗಳು ಭರವಸೆ

2025-11-30  Bangalore  101 views
ಭಾಗಮಂಡಲದ ನಾಡಗೌಡ  ಸಮುದಾಯ ಭವನಕ್ಕೆ 1 ಕೋಟಿ ಹಾಗೂ ಅರೆಬಾಷಿಕ ಗೌಡ ಜನಾಂಗಕ್ಕೆ  ಜಾಗ ಮಂಜೂರು ಮಾಡಲು  ಮುಖ್ಯಮಂತ್ರಿಗಳು ಭರವಸೆ

 

ಭಾಗಮಂಡಲದ ನಾಡಗೌಡ  ಸಮುದಾಯ ಭವನಕ್ಕೆ 1 ಕೋಟಿ ಹಾಗೂ ಅರೆಬಾಷಿಕ ಗೌಡ ಜನಾಂಗಕ್ಕೆ  ಜಾಗ ಮಂಜೂರು ಮಾಡಲು  ಮುಖ್ಯಮಂತ್ರಿಗಳು ಭರವಸೆ

ಬೆಂಗಳೂರು.                   

ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ ವತಿಯಿಂದ 2024ನೇ ಸಾಲಿನ  ಅರೆಭಾಷೆ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರಧಾನ ಜಂಬರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ  ಮುಖ್ಯಮಂತ್ರಿಗಳು ಅರೆಭಾಷೆ ವಿಭಿನ್ನವಾದ ಕಲೆಸಾಹಿತ್ಯ ಆಚಾರ ವಿಚಾರ ಸಂಸ್ಕೃತಿಯನ್ನು ಹೊಂದಿದೆ. ಭಾಗಮಂಡಲದಲ್ಲಿ ನಾಡಗೌಡ ಸಮುದಾಯದವರು ನಿರ್ಮಿಸುತ್ತಿರುವ ಸಮುದಾಯ ಭವನಕ್ಕೆ   ಒಂದು ಕೋಟಿ ಅನುದಾನ  ನೀಡಲಾಗುವುದು. ಅಲ್ಲದೆ  ಜನಾಂಗಕ್ಕೆ ಸಾಂಸ್ಕೃತಿಕ ಶೈಕ್ಷಣಿಕ ಮತ್ತು ಕ್ರೀಡಾ ಕೇಂದ್ರ ಸ್ಥಾಪನೆಯ ಉದ್ದೇಶಕ್ಕೆ ಕೊಡಗು ಗೌಡ ಸಮಾಜಕ್ಕೆ ಜಾಗ ಮಂಜೂರು ಮಾಡುವ ಕುರಿತು ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗುವುದು. ಪ್ರಶಸ್ತಿ ಭಾಜನರಾದ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳನ್ನು ಸಲ್ಲಿಸಿ ಗೌಡ ಸಮಾಜಕ್ಕೆ  ಶುಭ ಕೋರಿದರು.

             

  ವಿರಾಜಪೇಟೆ ಶಾಸಕರಾದ ಎ.ಎಸ್ ಪೊನ್ನಣ್ಣ ಮಾತನಾಡಿ  ಅರೆಭಾಷೆ ಸಂಸ್ಕೃತಿ ಆಚಾರ ವಿಚಾರ ರಕ್ಷಿಸುವುದೇ ನಮ್ಮ ಸರ್ಕಾರದ ಆದ್ಯತೆ.ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು  ಅರೆ ಭಾಷೆಯಲ್ಲಿ  ಪುರಸ್ಕೃತರಿಗೆ ಹಾಗೂ ಅರೆ ಭಾಷೆ  ಸಮುದಾಯಕ್ಕೆ  ಶುಭಾಶಯ ಕೋರಿದರು. ಅರೆಭಾಷೆ ಸಮುದಾಯವು ದೇಶಕ್ಕೆ ಹಾಗೂ ರಾಜ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ ಈ ಭಾಷೆಯ ಆಚಾರ ವಿಚಾರ ಕಲೆ ಸಂಸ್ಕೃತಿ, ಉಳಿಸುವುದೇ ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್, ಸಚಿವರಾದ ಬೈರತಿ ಸುರೇಶ್, ಮಡಿಕೇರಿ ಶಾಸಕರಾದ ಡಾ.ಮಂತರ್ ಗೌಡ, ಅರೆಭಾಷೆ  ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮಾವಾಜಿ,  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ್ ಬಿಳಿ ಮಲೆ. ಅಕಾಡೆಮಿ ಸದಸ್ಯರುಗಳು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.


Share: