One Tap News - Kannada News Daily

Header
collapse
...
Home / Crime News / ಸ್ಟುಡಿಯೊ ಕಳ್ಳರನ್ನು ಬಂಧಿಸಿದ ಮಡಿಕೇರಿ ಪೋಲೀಸ್. ಹದಿಯರೆಯದ ವಯಸ್ಸಲ್ಲಿ ಕಳ್ಳತನಕ್ಕೆ ಇಳಿದ ಯುವಕರು.

ಸ್ಟುಡಿಯೊ ಕಳ್ಳರನ್ನು ಬಂಧಿಸಿದ ಮಡಿಕೇರಿ ಪೋಲೀಸ್. ಹದಿಯರೆಯದ ವಯಸ್ಸಲ್ಲಿ ಕಳ್ಳತನಕ್ಕೆ ಇಳಿದ ಯುವಕರು.

2025-10-11  Kodagu Desk  139 views
ಸ್ಟುಡಿಯೊ ಕಳ್ಳರನ್ನು ಬಂಧಿಸಿದ ಮಡಿಕೇರಿ ಪೋಲೀಸ್. ಹದಿಯರೆಯದ ವಯಸ್ಸಲ್ಲಿ ಕಳ್ಳತನಕ್ಕೆ ಇಳಿದ ಯುವಕರು.

 

ಮಡಿಕೇರಿ. 

ಮಡಿಕೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಹಿನೂರು ರಸ್ತೆಯಲ್ಲಿ  ಎಂ. ಎಂ ಅಬ್ದುಲ್ ರೆಹಮಾನ್ ಗೆ ಸೇರಿದ ಬ್ರೈಟ್ ಡಿಜಿಟಲ್ ಸ್ಟುಡಿಯೋವನ್ನು ದಿನಾಂಕ 25.09.2025ರಂದು ರಾತ್ರಿ ಸಮಯದಲ್ಲಿ ಬಾಗಿಲು ಮರಿದು ಕಲರ್ ಪ್ರಿಂಟರ್ ಹಾಗೂ ಕೇಬಲ್ ಗಳನ್ನು ಕಳವು ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

  ತನಿಖೆಗೆ ಇಳಿದ ಮಡಿಕೇರಿ ವಿಶೇಷ ತನಿಖಾ ಪೊಲೀಸ್ ಅಧಿಕಾರಿಗಳು ಕಳವು ಮಾಡಿದ 5 ಜನ ಕಳ್ಳರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

24 ವರ್ಷದ ಬೇತು ಗ್ರಾಮದ ಮಹಮ್ಮದ್ ಸುಹೇಲ್, 20 ವರ್ಷದ ಹೊದವಾಡ ಗ್ರಾಮದ ಮಹಮದ್ ಮುಬಶೀರ್ ಟಿ. ಎಚ್, 20 ವರ್ಷದ ಕುಂಜಿಲ ಗ್ರಾಮದ ಮಹಮ್ಮದ್ ಜೈನದ್ದೀನ್, 20 ವರ್ಷದ ಕೊಳಕೇರಿ ಗ್ರಾಮದ ಮುಜಾಮಿಲ್ ಕೆ. ಎಂ ಮತ್ತು 25 ವರ್ಷದ ಬೇತು ಗ್ರಾಮದ ಫಯಾಜ್ ಆರ್. ಬಿ ಬಂಧಿತ್ತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಒಂದು ಕಲರ್ ಪ್ರಿಂಟರ್ ಮತ್ತು ಕೇಬಲ್ ಗಳನ್ನು ಹೊಸ ಪಡಿಸಿಕೊಳ್ಳಲಾಗಿದೆ.

ಈ ಪ್ರಕರಣವನ್ನು ಭೇದಿಸಿದ ಮಡಿಕೇರಿಯ ಪೊಲೀಸ್ ಅಧಿಕಾರಿಗಳಾದ ಚಂದ್ರಶೇಖರ್ ಪಿ. ಡಿಎಸ್ಪಿ, ಪ್ರಭಾರ. ರಾಜು ಪಿ. ಕೆ, ಸಿಪಿಐ. ಮಡಿಕೇರಿ ನಗರ ವೃತ, ಕು// ಅನ್ನಪೂರ್ಣ ಎಸ್. ಎಸ್, ಪಿಎಸ್ ಐ ಹಾಗೂ ನಗರ ಪೊಲೀಸ್ ಠಾಣಾ ಸಿಬ್ಬಂದಿಗಳ ವಿಶೇಷ ತಂಡವನ್ನು  ಪೊಲೀಸ್ ಅಧೀಕ್ಷಕರು ಶ್ರೀ ಕೆ. ರಾಮರಾಜನ್, ಐಪಿಎಸ್. ಹಾಗೂ ಶ್ರೀ ಬಿ. ಪಿ ದಿನೇಶ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಇವರು ಶ್ಲಾಘಿಸಿದರು.

ವರದಿ, ರವಿ ಕುಮಾರ್. 


Share: