One Tap News - Kannada News Daily

Header
collapse
...
Home / Crime News / ಹೆಣ್ಣು ಬಾಕನ ಹೆಡೆಮುರಿ ಕಟ್ಟಿದ ಮೈಸೂರು ಪೋಲೀಸ್. ಸಬ್ ಇನ್ಸ್‌ಪೆಕ್ಟರ್ ಜಯಕೀರ್ತಿ ಸರ್ ಗೆ ಎಲ್ಲಡೆ ಮೆಚ್ಚುಗೆ

ಹೆಣ್ಣು ಬಾಕನ ಹೆಡೆಮುರಿ ಕಟ್ಟಿದ ಮೈಸೂರು ಪೋಲೀಸ್. ಸಬ್ ಇನ್ಸ್‌ಪೆಕ್ಟರ್ ಜಯಕೀರ್ತಿ ಸರ್ ಗೆ ಎಲ್ಲಡೆ ಮೆಚ್ಚುಗೆ

2025-10-11  Mysore Desk  146 views
ಹೆಣ್ಣು ಬಾಕನ ಹೆಡೆಮುರಿ ಕಟ್ಟಿದ ಮೈಸೂರು ಪೋಲೀಸ್. ಸಬ್ ಇನ್ಸ್‌ಪೆಕ್ಟರ್  ಜಯಕೀರ್ತಿ ಸರ್ ಗೆ ಎಲ್ಲಡೆ ಮೆಚ್ಚುಗೆ

ಮೈಸೂರು. 

ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಮೈಸೂರು ಪೊಲೀಸರು ನ್ಯಾಯ ಒದಗಿಸುವತ್ತ ಗಂಭೀರವಾಗಿ ಹೆಜ್ಜೆ ಹಾಕಿದ್ದಾರೆ. ನೀಚ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ವಿಕೃತಕಾಮಿಯನ್ನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಸೆರೆಯಾದ ಕಾಮುಕ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳುವ ಯತ್ನ ನಡೆದಾಗ ಕಾಲಿಗೆ ಗುಂಡು ಹಾರಿಸಿ ತಮ್ಮನ್ನ ರಕ್ಷಿಸಿಕೊಂಡಿದ್ದಲ್ಲದೆ ಅತ್ಯಾಚಾರಿಗೆ ನರಕ ತೋರಿಸಿದ್ದಾರೆ. 

ವಿಜಯನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಜೈಕೀರ್ತಿ ರವರ ಸಮಯ ಪ್ರಜ್ಞೆ ಮೆಚ್ಚುವಂತದ.  ಕಾಮುಕನ ಮೇಲೆ ಇನ್ಸ್‌ಪೆಕ್ಟರ್ ಗುಂಡು ಹಾರಿಸದಿದ್ದಲ್ಲಿ ಪೊಲೀಸರಿಗೂ ಅಪಾಯ ಕಟ್ಟಿಟ್ಟಬುತ್ತಿಯಾಗುತ್ತಿತ್ತು. ಆ ಕ್ಷಣದಲ್ಲಿ ಅಧಿಕಾರಿ ತೆಗೆದುಕೊಂಡ ನಿರ್ಣಯ ಸರಿಯಾಗಿಯಾದೆ. 

 ಸಧ್ಯ ಈಗ ಅಧಿಕಾರಿ ಜೈ ಕೀರ್ತಿ ರವರು ಮೈಸೂರಿನ ಸೂಪರ್ ಕಾಪ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಯಾವಾಗ ಬಾಲಕಿ ಮೇಲೆ ಅತ್ಯಾಚಾರ ಕೊಲೆ ಪ್ರಕರಣ ಬೆಳಕಿಗೆ ಬಂತೊ ಪೊಲೀಸ್ ಕಮೀಷನರ್ ಅಲರ್ಟ್ ಆಗಿದ್ದಾರೆ. ವೆಂಕಟೇಶ್ ಹತ್ಯೆ ಪ್ರಕರಣದ ಹಂತಕರನ್ನ ಜೈಲು ಕಂಬಿ ಹಿಂದೆ ಕಳಿಸಿದ ಬೆನ್ನ ಹಿಂದೆಯೇ ಅದೇ(ದಸರಾ ವಸ್ತುಪ್ರದರ್ಶನದ ಬಳಿ) ಸ್ಥಳದಲ್ಲಿ 9 ವರ್ಷದ ಬಾಲಕಿಯ ಮೃತದೇಹ ದೊರೆತಾಗ ಮೈಸೂರಿನ ಜನತೆ ಬೆಚ್ಚಿಬಿದ್ದದ್ದು  ಮಾತ್ರವಲ್ಲ. ಪೊಲೀಸರು ಸಹ ವಿಚಲಿತರಾದರು. ಕೇವಲ 24 ಗಂಟೆ ಅವಧಿಯಲ್ಲಿ ಒಂದೇ ಸ್ಥಳದಲ್ಲಿ ಎರಡು ಹತ್ಯಾ ಪ್ರಕರಣಗಳು ಪೊಲೀಸರ ನಿದ್ದೆ ಕೆಡಿಸಿತು.

ಮಗು ಮೃತದೇಹ ಪತ್ತೆಯಾದ ಸ್ಥಿತಿ ಗಮನಿಸಿದಾಗಲೇ ಪೊಲೀಸರಿಗೆ ಖಚಿತವಾಗಿತ್ತು ಇದು ಅತ್ಯಾಚಾರ ಮತ್ತು ಕೊಲೆ ಎಂದು. ಬಾಲಕಿ ಧರಿಸಿದ್ದ ಕೆಳ ಉಡುಪು ಮಾಯವಾಗಿತ್ತು. ದೇಹದ ಮೇಲೆ   20 ಕ್ಕೂ ಹೆಚ್ಚು ಸ್ಥಳದಲ್ಲಿ ಗಾಯದ ಗುರುತುಗಳು. ಬಾಲಕಿಯ ಖಾಸಗಿ ಅಂಗ ಛಿದ್ರವಾಗಿತ್ತು. ಅದೊಂದು ಭೀಬತ್ಸ ಕೃತ್ಯವೆಂಬುದರಲ್ಲಿ ಸಂಶಯವೇ ಇರಲಿಲ್ಲ. ಧಿಢೀರ್ ಅಲ್ಲಿಗೆ ಹಾಜರಾದ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಡಿಸಿಪಿಗಳಾದ ಬಿಂದುಮಣಿ ಹಾಗೂ ಸುಂದರರಾಜ್ ತಡಮಾಡದೆ ದುಷ್ಕರ್ಮಿಯ ಪತ್ತೆಗೆ ಡಿಸೈಡ್ ಮಾಡಿ ಮೂರು ತಂಡಗಳನ್ನ ರಚಿಸಿದ್ರು. ವಿಜಯನಗರ ಇನ್ಸ್ಪೆಕ್ಟರ್ ಸುರೇಶ್, ಸಬ್ ಇನಸ್ಪೆಕ್ಟರ್ ಜೈಕೀರ್ತಿ ಹಾಗೂ ಮಹಿಳಾ ಠಾಣೆ ಇನ್ಸ್ಪೆಕ್ಟರ್ ಅಶೋಕ್ ನೇತೃತ್ವದಲ್ಲಿ ಮೂರು ತಂಡ ರಚನೆಯಾಗಿತ್ತು. ಅಷ್ಟರಲ್ಲಿ ಪೊಲೀಸರಿಗೆ ಸಿಸಿ ಕ್ಯಾಮರಾ ಸುಳಿವು ದೊರೆತಿತ್ತು.

ದಸರಾಗಾಗಿ ಕಲಬುರ್ಗಿಯಿಂದ ಬೆಲೂನ್ ಮಾರಾಟ ಮಾಡಲು ಬಂದ ಒಂದು ಕುಟುಂಬದ ನತದೃಷ್ಟ ಹೆಣ್ಣುಮಗಳು ಈ ಬಾಲಕಿ. ರಾತ್ರಿ ಸುಮಾರು 11 ಗಂಟೆವರೆಗೂ ಬೆಲೂನ್ ಹಾಗೂ ಬೊಂಬೆಗಳನ್ನ ಮಾರಾಟ ಮಾಡಿ ಧಣಿವಾದ ಈ ಕುಟುಂಬ ದಸರಾ ವಸ್ತುಪ್ರದರ್ಶನದ ಬಳಿಯೇ ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ ಪ್ಲಾಸ್ಟಿಕ್ ಶೆಡ್ ನಲ್ಲಿ ನಿದ್ರೆಗೆ ಜಾರಿದ್ದಾರೆ. ಹೆತ್ತವರ ಜೊತೆ ಬಾಲಕಿ ಸಹ ಮೊಬೈಲ್ ನಲ್ಲಿ ಸಿನಿಮಾ ವೀಕ್ಷಿಸುತ್ತಾ ನಿದ್ರೆಗೆ ಶರಣಾಗಿದ್ದಾಳೆ. ಕೆಲವೇ ಗಂಟೆಗಳಲ್ಲಿ  ವಿಕೃತ ಕಾಮುಕನ ವೇಷದಲ್ಲಿ ಬಂದ ನೀಚ ಬಾಲಕಿಯನ್ನ ಮುಕ್ಕಿಬಿಟ್ಟಿದ್ದಾನೆ. ಗಾಢ ನಿದ್ರೆಯಲ್ಲಿದ್ದ ಬಾಲಕಿಯ ಬಾಯಿ ಮುಚ್ಚಿ ಹೊತ್ತೊಯ್ದ ಕಾಮುಕ ಘೋರ ಕೃತ್ಯವೆಸಗಿ ಪರಾರಿಯಾಗಿದ್ದಾನೆ.

ಕುಟುಂಬ ನೆಲೆಸಲು ಹಾಕಿದ್ದ ತಾತ್ಕಾಲಿಕ ಶೆಡ್ ಮುಂಭಾಗವೇ ಇದ್ದ ಮನೆಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾ ಅಧಿಕಾರಿಗಳಿಗೆ ವರದಿ ಒಪ್ಪಿಸಿದೆ.  ಕೆಲವೇ ಸಮಯದಲ್ಲಿ ಅತ್ಯಾಚಾರಿಯ ಫೋಟೋಗಳು ಪೊಲೀಸರ ಕೈ ಸೇರಿದೆ. ತಕ್ಷಣವೇ ಆರೋಪಿ ಸೆರೆಗೆ ರಚನೆಯಾದ ತಂಡಕ್ಕೆ ಫೋಟೋಗಳು ರವಾನೆಯಾಗಿದೆ. ಘಟನೆ ನಡೆದ ಸ್ಥಳದಿಂದ ಹೊರಟ  ಕಾಮುಕನ MOVEMENTS ಬಗ್ಗೆ ತಂಡ ಮಾಹಿತಿ ಪಡೆದಿದೆ. ಅಲ್ಲಿಂದ ಮುಂದೆ ಸಾಗುವ ಎಲ್ಲಾ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಾಗಳನ್ನ ಪರಿಶೀಲಿಸಿದಾಗ ಅತ್ಯಾಚಾರಿ ಕೊನೆಗೆ ನಿಂತಿದ್ದು ಹಳೆ RMC ಖಾಸಗಿ ಬಸ್ ಸ್ಟ್ಯಾಂಡ್ ಬಳಿ. ಖಾಸಗಿ ಬಸ್ ಸ್ಟ್ಯಾಂಡ್ ನಲ್ಲಿದ್ದ ಕೆಲವು ವ್ಯಕ್ತಿಗಳನ್ನ ವಿಚಾರಿಸಿದಾಗ ಈತ ಕಾರ್ತಿಕ್@ಗರಡಿ ಎಂಬ ವಿಚಾರ ಬೆಳಕಿಗೆ ಬಂದಿದೆ. ಬಸ್ ಗಳನ್ನ ಸ್ವಚ್ಛಗೊಳಿಸುವ ಕೆಲಸ ಮಾಡಿಕೊಂಡಿದ್ದರು ಸಿದ್ದಲಿಂಗಪುರದ ನಿವಾಸಿ ಎಂದು ಗೊತ್ತಾಗಿದೆ. ಬೆಳಿಗ್ಗೆ ಸುಮಾರು 10 ಗಂಟೆ ವೇಳೆಯಲ್ಲಿ ಕೊಳ್ಳೆಗಾಲ ಬಸ್ ಹತ್ತಿ ಹೊರಟ ಮಾಹಿತಿ ಲಭ್ಯವಾಗಿದೆ. ತಡಮಾಡದ ತಂಡ ಕೊಳ್ಳೇಗಾಲಕ್ಕೆ ಪ್ರಯಾಣಿಸಿದೆ. ಕೊಳ್ಳೆಗಾಲದ ಭೀಮನಗರ,ಆದರ್ಶನಗರದಲ್ಲಿ ತಂಡ ಹುಡುಕಾಟ ನಡೆಸಿದಾಗ ಕಾರ್ತಿಕ್ ಪತ್ತೆಯಾಗಿಲ್ಲ. ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಇರುವ ಹೊಂಗೆ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದ ಕಾರ್ತಿಕ್ ಪೊಲೀಸರ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಸುತ್ತುವರೆಯುತ್ತಿದ್ದಂತೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಆದ್ರೆ ಪೊಲೀಸರು ಹೆಣೆದ ಬಲೆಗೆ ಸುಲಭವಾಗಿ ಸಿಕ್ಕಿಬಿದ್ದಿದ್ದಾನೆ. ಮೈಸೂರಿನತ್ತ ಕರೆತರುತ್ತಿದ್ದಾಗ ಆತನ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಬಿಎಂಶ್ರೀ ನಗರದ ಬಳಿ ತನ್ನ ಮನೆ ಇರುವುದಾಗಿ ತಿಳಿಸಿದ್ದು ತಲಾಶೆಗಾಗಿ ಹಾಗೂ ಮನೆ ಶೋಧನೆ ಮಾಡಲು ಬಿಎಂಶ್ರೀ ನಗರದತ್ತ ಕರೆತಂದಿದ್ದಾರೆ. ರಿಂಗ್ ರೋಡ್ ಬಳಿ ಗುಡ್ ಶೆಡ್ ಬಳಿ ಮೂತ್ರ ವಿಸರ್ಜನೆಗೆ ಅನುಮತಿ ಕೇಳಿದ್ದಾನೆ. ಹತ್ತಿರದಲ್ಲೇ ಬಿದ್ದಿದ್ದ ಬಿಯರ್ ಬಾಟಲ್ ಎತ್ತಿಕೊಂಡ ಕಾರ್ತಿಕ್ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಸಿಬ್ಬಂದಿಗಳಾದ ಪ್ರಕಾಶ್ ಹಾಗೂ ವೆಂಕಟೇಶ್ ಹಿಡಿಯಲು ಪ್ರಯತ್ನಿಸಿದಾಗ ವೆಂಕಟೇಶ್ ಗೆ ಬಾಟಲ್ ನಿಂದ ಇರಿದಿದ್ದಾನೆ. ಆ ಸಮಯದಲ್ಲಿ ಸಬ್ ಇನ್ಸ್ಪೆಕ್ಟರ್ ಜೈ ಕೀರ್ತಿ ಪಿಸ್ತೂಲು ಹಿಡಿದು ಎಚ್ಚರಿಕೆ ನೀಡಿದ್ದಾರೆ. ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚನೆ ನೀಡಿದ್ದಾರೆ. ಹೀಗಿದ್ದರೂ ಬಾಟಲ್ ಹಿಡಿದು ಜೈಕೀರ್ತಿ ಮೇಲೂ ಹಲ್ಲೆಗೆ ಮುಂದಾಗಿದ್ದಾನೆ. ಕಾರ್ತಿಕ್ ನ ವರ್ತನೆ ನಿಯಂತ್ರಿಸಲು ಸಾಧ್ಯವಾಗದ ಹಿನ್ನಲೆ ಜೈಕೀರ್ತಿ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಮುದುರಿಕೊಂಡು ಶರಣಾದ ಕಾರ್ತಿಕ್ ಹಾಗೂ ಗಾಯಗೊಂಡ ಸಿಬ್ಬಂದಿ ವೆಂಕಟೇಶ್ ರನ್ನ ಕೆ ಆರ್ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ. ಜೈ ಕೀರ್ತಿ ಹಾಗೂ ಪ್ರಕಾಶ್ ರವರಿಗೂ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 

ನಂತರ ಕಾರ್ತಿಕ್ ಬಗ್ಗೆ ಹಿನ್ನಲೆ ಕೆದಕಿದ ಪೊಲೀಸರಿಗೆ ಕೊಳ್ಳೆಗಾಲದಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗುವ ಪ್ರಯತ್ನ ಮಾಡಿ ಶಿಕ್ಷೆ ಅನುಭವಿಸಿದ್ದ ಅಪರಾಧಿ ಎಂದೂ ಸಹ ತಿಳಿದು ಬಂದಿದೆ. ಒಟ್ಟಾರೆ ಸಿಸಿ ಕ್ಯಾಮರಾ ನೀಡಿದ ಸುಳಿವು ಅತ್ಯಾಚಾರಿಯ ಸೆರೆಗೆ ನೆರವಾಗಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ವೇಳೆ ಜೈಕೀರ್ತಿ ಗುಂಡು ಹಾರಿಸುವ ದಿಟ್ಟ ನಿರ್ಧಾರ ಕೈಗೊಳ್ಳದಿದ್ದಲ್ಲಿ ಕಾಮುಕನಿಂದ ಮತ್ತಷ್ಟು ಅನಾಹುತ ನಡೆಯುತ್ತಿತ್ತು. ಸಧ್ಯ ಬಾಲಕಿಯನ್ನ ವಿಕೃತವಾಗಿ ಅತ್ಯಾಚಾರವೆಸಗಿ ಹತ್ಯೆಗೈದ ಕಾಮುಕ ಕಾರ್ತಿಕ್ ಸೆರೆ ಹಿಡಿದ ಮೈಸೂರು ಪೊಲೀಸರ ಕಾರ್ಯಕ್ಷಮತೆ ಬಗ್ಗೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ. ಹಾಗೆಯೇ ಜೈ ಕೀರ್ತಿ ರವರು ಸೂಪರ್ ಕಾಪ್ ಎಂಬ ಹೆಸರು ಗಳಿಸಿದ್ದಾರೆ.

ನಿಮಗೊಂದು ಸಲಾಂ ಸರ್🙏


Share: