One Tap News - Kannada News Daily

Header
collapse
...
Home / State News / ಕೆಎಸ್‌ಡಿಎಲ್ ಗೆ 451 ಕೋಟಿ ಲಾಭ. ಸಚಿವ ಎಂ. ಬಿ ಪಾಟಿಲ್

ಕೆಎಸ್‌ಡಿಎಲ್ ಗೆ 451 ಕೋಟಿ ಲಾಭ. ಸಚಿವ ಎಂ. ಬಿ ಪಾಟಿಲ್

2025-10-25  Bangalore  17 views
ಕೆಎಸ್‌ಡಿಎಲ್ ಗೆ 451 ಕೋಟಿ ಲಾಭ. ಸಚಿವ ಎಂ. ಬಿ ಪಾಟಿಲ್

ಬೆಂಗಳೂರು. 

ಕೆಎಸ್‌ಡಿಎಲ್ ಸಂಸ್ಥೆಯು ಕಳೆದ ಹಣಕಾಸು ವರ್ಷದಲ್ಲಿ 1,700 ಕೋಟಿ ರೂಪಾಯಿ ವಹಿವಾಟು ನಡೆಸಿ, 451 ಕೋಟಿ ರೂ. ಲಾಭವನ್ನು ಕಂಡಿದೆ. ಇದರ ಪೈಕಿ ನಿಯಮದಂತೆ ಶೇ.30ರಷ್ಟು ಲಾಭಾಂಶವನ್ನು ಸರ್ಕಾರಕ್ಕೆ ಕೊಡಲಾಗಿದೆ. ವಹಿವಾಟು, ಲಾಭ ಮತ್ತು ಲಾಭಾಂಶ ಮೂರರಲ್ಲೂ ಇದು ಸಾರ್ವಕಾಲಿಕ ದಾಖಲೆ ಆಗಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ. ಬಿ. ಪಾಟೀಲ್‌ ಮತ್ತು ಕೆಎಸ್‌ಡಿಎಲ್ ಅಧ್ಯಕ್ಷರಾದ ಅಪ್ಪಾಜಿ ನಾಡಗೌಡ ಅವರು ಕೆಎಸ್‌ಡಿಎಲ್‌ ಲಾಭಾಂಶದ ₹134,87,45,862 ಕೋಟಿಯ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿದ್ದಾರೆ. 

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 5/- ಕೋಟಿ ರೂಪಾಯಿಗಳ ಚೆಕ್ ಅನ್ನು ನೀಡಿದ್ದಾರೆ. 


Share: